ಕೊರೊನಾ ವೈರಸ್ ಹಿನ್ನಲೆಯಲ್ಲಿ ಈ ಬಾರಿ ಸ್ವಾತಂತ್ರ್ಯ ದಿನಾಚರಣೆ ಭಿನ್ನವಾಗಿರಲಿದೆ. ಕೆಂಪು ಕೋಟೆಯಲ್ಲಿ ನಡೆಯುವ ಧ್ವಜಾರೋಹಣ ಕಾರ್ಯಕ್ರಮಕ್ಕೆ ಎಲ್ಲ ಸಿದ್ಧತೆ ನಡೆಯುತ್ತಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಧ್ವಜಾರೋಹಣಕ್ಕೆ ಬೆಳಿಗ್ಗೆ 7.21ಕ್ಕೆ ಇಲ್ಲಿಗೆ ಬರಲಿದ್ದಾರೆ.
ಇದ್ರಲ್ಲಿ ಪಾಲ್ಗೊಳ್ಳುವ ಅಧಿಕಾರಿಗಳಿಗೆ ಈಗಾಗಲೇ ಕೊರೊನಾ ಪರೀಕ್ಷೆ ನಡೆಸಲಾಗಿದೆ. ಕೋವಿಡ್ ಟೆಸ್ಟ್ ನೆಗೆಟಿವ್ ಬಂದಿರುವ ಮತ್ತು ಕೊರೊನಾ ಗೆದ್ದು ಬಂದವರು ಮಾತ್ರ ಇಲ್ಲಿ ಬರಬಹುದು. ಕೊರೊನಾ ಟೆಸ್ಟ್ ವರದಿಯಿಲ್ಲದವರು ಸ್ಥಳಕ್ಕೆ ಬರುವಂತಿಲ್ಲ.
ಕೊರೊನಾ ಹಿನ್ನಲೆಯಲ್ಲಿ ಕಾರ್ಯಕ್ರಮವನ್ನು ಕಡಿಮೆ ಮಾಡಲಾಗಿದೆ. ಸೇನಾ ಪಡೆಗಳ ಸಿಬ್ಬಂದಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲಿದ್ದಾರೆ. ಪ್ರಧಾನ ಮಂತ್ರಿ ಭಾಷಣ 45 ನಿಮಿಷದಿಂದ 1 ಗಂಟೆಯವರೆಗೆ ಇರಲಿದೆ.
ಸಂಪ್ರದಾಯದಂತೆ ಪಿಎಂಗೆ ನಮಸ್ಕರಿಸುವ ಸೈನಿಕರಿಗೆ ಮೊದಲೇ ಕ್ವಾರಂಟೈನ್ ಘೋಷಣೆ ಮಾಡಲಾಗಿದೆ. ಮೆರವಣಿಗೆ ಪೂರ್ವಾಭ್ಯಾಸದಲ್ಲಿ ಪಾಲ್ಗೊಳ್ಳುವ ಅವರು ನಂತ್ರ ನೇರವಾಗಿ ಮನೆಯಲ್ಲಿ ಕ್ವಾರಂಟೈನ್ ಆಗಲಿದ್ದಾರೆ.
ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಫೋಟೋಗ್ರಾಫರ್ ಗಳಿಗೂ ಕೊರೊನಾ ಪರೀಕ್ಷೆ ನಡೆಯಲಿದೆ. ವರದಿ ನೆಗೆಟಿವ್ ಬಂದರೆ ಮಾತ್ರ ಅವ್ರಿಗೆ ಅವಕಾಶ ಸಿಗಲಿದೆ. ಏಜೆನ್ಸಿ ಮತ್ತು ಸರ್ಕಾರಿ ಮಾಧ್ಯಮಗಳನ್ನು ಹೊರತುಪಡಿಸಿ ಯಾವುದೇ ಖಾಸಗಿ ಕ್ಯಾಮರಾಗಳಿಗೆ ಅವಕಾಶವಿಲ್ಲ. 110 ವಿವಿಐಪಿ ಮತ್ತು ವಿಐಪಿ ಅತಿಥಿಗಳಿಗೆ ಮಾತ್ರ ಅವಕಾಶವಿದೆ. 500 ಮಕ್ಕಳಿಗೆ ಮಾತ್ರ ಅವಕಾಶವಿದ್ದು ಎಲ್ಲರೂ ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಬೇಕಿದೆ.