ಕೊರೊನಾ ಲಸಿಕೆ ಬಗ್ಗೆ ಅನೇಕ ಜಾಗೃತಿ ಕಾರ್ಯಕ್ರಮ ನಡೆಯುತ್ತಿದೆ. ಆದ್ರೂ ಅನೇಕರು ಲಸಿಕೆ ತೆಗೆದುಕೊಳ್ಳಲು ಹಿಂದೇಟು ಹಾಕ್ತಿದ್ದಾರೆ. ಆದ್ರೆ ಲಸಿಕೆ ಬಗ್ಗೆ ಯುಎಸ್ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ ನಡೆಸಿದ ಅಧ್ಯಯನದಲ್ಲಿ ಮಹತ್ವದ ವಿಷ್ಯ ಹೊರ ಬಿದ್ದಿದೆ. ಲಸಿಕೆ ಹಾಕದ ಜನರು, ಎರಡು ಬಾರಿ ಲಸಿಕೆ ಪಡೆದವರಿಗಿಂತ ಹೆಚ್ಚು ಅಪಾಯ ಎದುರಿಸಲಿದ್ದಾರೆ. ಅವರಿಗೆ ಎರಡನೇ ಬಾರಿಯೂ ಕೊರೊನಾ ಸೋಂಕು ಕಾಡುವ ಅಪಾಯವಿದೆ ಎಂದು ಅಧ್ಯಯನದಲ್ಲಿ ಹೇಳಲಾಗಿದೆ.
ಈ ಅಧ್ಯಯನವನ್ನು ಕೆಂಟುಕಿ ರಾಜ್ಯದ 246 ವಯಸ್ಕರ ಮೇಲೆ ನಡೆಸಲಾಗಿದೆ. 2020 ರಲ್ಲಿ ಸೋಂಕಿಗೆ ಒಳಗಾದ ನಂತರ ಲಸಿಕೆ ಪಡೆಯದವರು ಈ ವರ್ಷ ಮೇ ಮತ್ತು ಜೂನ್‌ನಲ್ಲಿ ಮತ್ತೆ ಸೋಂಕಿಗೆ ಒಳಗಾಗಿದ್ದಾರೆ ಎಂಬುದು ಗೊತ್ತಾಗಿದೆ. ಫಿಜರ್, ಮಾಡರ್ನಾ ಅಥವಾ ಜಾನ್ಸನ್ ಆಂಡ್ ಜಾನ್ಸನ್ ಲಸಿಕೆಗಳ ಸಂಪೂರ್ಣ ಲಸಿಕೆ ಹಾಕಿಸಿಕೊಂಡವರಿಗಿಂತ, ಲಸಿಕೆ ಪಡೆಯದವರು ಶೇಕಡಾ 2.34 ಪಟ್ಟು ಹೆಚ್ಚು ಸೋಂಕಿಗೆ ಒಳಗಾಗುವ ಸಾಧ್ಯತೆಯಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ನ್ಯೂಯಾರ್ಕ್ ಟೈಮ್ಸ್ ವರದಿಯ ಪ್ರಕಾರ, ಈ ಹಿಂದೆ ಕೊರೊನಾ ವೈರಸ್ ಸೋಂಕಿಗೆ ಒಳಗಾದ ಜನರ ರಕ್ತದ ಮಾದರಿಗಳಲ್ಲಿ ಬೀಟಾ ರೂಪಾಂತರದ ವಿರುದ್ಧ ಪ್ರತಿಕಾಯದ ಪ್ರತಿಕ್ರಿಯೆಯು ತುಂಬಾ ಕಡಿಮೆಯಾಗಿದೆ ಎಂದು ಅಧ್ಯಯನವು ಬಹಿರಂಗಪಡಿಸಿದೆ.