ಅಮೃತಸರ: ಸಾಮಾಜಿಕ ಜಾಲತಾಣದ ತಾಕತ್ತೇ ಹಾಗೆ, ಬಹು ಬೇಗನೇ ಸಮಾನ ಮನಸ್ಕರನ್ನು ಒಂದುಗೂಡಿಸುತ್ತದೆ. ಎಂಥದ್ದೇ ಕಾರ್ಯವನ್ನು ಸುಲಭ ಮಾಡಿಬಿಡುತ್ತದೆ. ಪಾರ್ಶ್ವವಾಯುವಿಗೆ ತುತ್ತಾದ ಸಿಕ್ ವ್ಯಕ್ತಿಯೊಬ್ಬ ಅಮೃತಸರದ ಒಂದು ಮಾಲ್ ಎದುರು ಅಗರಬತ್ತಿ ಮಾರುತ್ತಿರುವ ಫೋಟೋ ಜಾಲತಾಣದಲ್ಲಿ ಈಗ ವೈರಲ್ ಆಗಿದೆ.
ಜಸ್ ಒಬೆರಾಯ್ ಎಂಬುವವರು ಟ್ವಿಟರ್ ನಲ್ಲಿ ಸಿಕ್ ವ್ಯಕ್ತಿಯ ಫೋಟೋ ಹಾಕಿ “ಇವರು ಪಾರ್ಶ್ವವಾಯುವಿಗೆ ತುತ್ತಾಗಿದ್ದಾರೆ. ಆದರೂ ಸ್ವಾವಲಂಬನೆಯ ಜೀವನಕ್ಕಾಗಿ ಅಗರಬತ್ತಿ ಮಾರುತ್ತಿದ್ದಾರೆ. ಅಗರಬತ್ತಿ ಬಳಕೆದಾರರು ಇವರ ಬಳಿಯೇ ಕೊಂಡು ಅವರಿಗೆ ಸಹಾಯ ಮಾಡಿʼʼ ಎಂದು ವಿನಂತಿಸಿದ್ದಾರೆ. ಸಾಕಷ್ಟು ಜನ ಅವರ ಪೋಸ್ಟ್ ಗೆ ಸ್ಪಂದನೆ ನೀಡಿದ್ದಾರೆ.
ನಟ ರಿಚಾ ಚಾಂದ್ ಸಹ ಈ ಪೋಸ್ಟ್ ಗೆ ಪ್ರತಿಕ್ರಿಯಿಸಿದ್ದು, “ಅಮೃತಸರ ಜನರೇ ಈಗ ನಿಮ್ಮ ಪಾಳಿ ಒಟ್ಟಾಗಿ” ಎಂದು ಕರೆ ನೀಡಿದ್ದಾರೆ. ಇನ್ನೊಬ್ಬ “ಅಮೃತಸರ ಜನರೇ ಹೃದಯ ವೈಶಾಲ್ಯತೆ ಮೆರೆಯಿರಿ” ಎಂದಿದ್ದಾರೆ. ಕಳೆದ ವಾರ ದೆಹಲಿಯಲ್ಲಿ ವೃದ್ಧ ದಂಪತಿ ಡಾಬಾ ನಡೆಸುತ್ತಿರುವ ವಿಡಿಯೋ ವೈರಲ್ ಆಗಿತ್ತು. ನಂತರ ಸಾವಿರಾರು ನೆಟ್ಟಿಗರು ಅವರ ಸಹಾಯಕ್ಕೆ ನಿಂತಿದ್ದರು.
https://twitter.com/iJasOberoi/status/1314800227841306624?ref_src=twsrc%5Etfw%7Ctwcamp%5Etweetembed%7Ctwterm%5E1314800227841306624%7Ctwgr%5Eshare_3&ref_url=https%3A%2F%2Fwww.timesnownews.com%2Fthe-buzz%2Farticle%2Fambarsar-waleyo-dil-waar-do-apna-sardarji-with-cerebral-palsy-sells-agarbatti-in-amritsar-netizens-shower-support%2F666478
https://twitter.com/Sankar_I_Am/status/1315377390558740480?ref_src=twsrc%5Etfw%7Ctwcamp%5Etweetembed%7Ctwterm%5E1315377390558740480%7Ctwgr%5Eshare_3&ref_url=https%3A%2F%2Fwww.timesnownews.com%2Fthe-buzz%2Farticle%2Fambarsar-waleyo-dil-waar-do-apna-sardarji-with-cerebral-palsy-sells-agarbatti-in-amritsar-netizens-shower-support%2F666478