ಅಮೆಜಾನ್ ವಾಯ್ಸ್ ಅಸಿಸ್ಟಂಟ್ ಅಲೆಕ್ಸಾ ಭಾರತದಲ್ಲಿ ಮೂರು ವರ್ಷ ಪೂರೈಸಿದೆ. ಈ ಮೂರು ವರ್ಷದಲ್ಲಿ ಅಲೆಕ್ಸಾದ ಸಂವಹನ ಸಾಮರ್ಥ್ಯ 67 ಪ್ರತಿಶತ ಹೆಚ್ಚಾಗಿದೆ.
ವಿಶೇಷ ಅಂದರೆ ಭಾರತದ ಬಳಕೆದಾರರು 2020ರಲ್ಲಿ ಒಟ್ಟು 19 ಸಾವಿರ ಬಾರಿ ಐ ಲವ್ ಯೂ ಎಂದು ಹೇಳಿದ್ದಾರಂತೆ..! 2019ಕ್ಕೆ ಹೋಲಿಸಿದ್ರೆ ಇದು 1200 ಪರ್ಸೆಂಟ್ ಹೆಚ್ಚಾಗಿದೆ ಎಂದು ಕಂಪನಿ ತಿಳಿಸಿದೆ.
ಇನ್ನು ಇದರ ಜೊತೆಯಲ್ಲಿ ಭಾರತದಲ್ಲಿ ವಾಯ್ಸ್ ಅಸಿಸ್ಟಂಟ್ ಅಲೆಕ್ಸಾ ಬಳಿಕ ಹನುಮಾನ್ ಚಾಲೀಸಾ, ಶೈತಾನ್ ಕಾ ಸಾಲಾ ಹಾಗೂ ಬೇಬಿ ಶಾರ್ಕ್ ಹಾಡನ್ನ ಅಲೆಕ್ಸಾದಲ್ಲಿ ಹೆಚ್ಚು ಬಾರಿ ಕೇಳಲಾಗಿದೆ.
ಇದನ್ನ ಬಿಟ್ಟರೆ ಪ್ರಾಣಾಯಾಮ, ವರ್ಕೌಟ್ ಮ್ಯೂಸಿಕ್, ಗೇಮ್ಸ್ , ಸೌಮ್ಯ ಸಂಗೀತ, ಶಾಯರಿಯನ್ನ ಹೆಚ್ಚಾಗಿ ಕೇಳಲಾಗಿದೆ. ಭಾರತದಲ್ಲಿ ಅಲೆಕ್ಸಾ ಇಂಗ್ಲಿಷ್, ಹಿಂದಿ ಹಾಗೂ ಹಿಂದಿ ಮಿಶ್ರಿತ ಇಂಗ್ಲಿಷ್ ಭಾಷೆಯಲ್ಲಿ ಸಂವಹನ ನಡೆಸುತ್ತದೆ.