ಚಂಡಿಗಢ: ಎಪಿಎಂಸಿ ಕಾಯ್ದೆ ತಿದ್ದುಪಡಿ ವಿರೋಧಿಸಿ ಪ್ರತಿಭಟನೆ ನಡೆಸಿರುವ ರೈತರು ರಾಜಸ್ಥಾನದಲ್ಲಿ ಟೆಲಿಕಾಂ ಟವರ್ ಗಳ ಮೇಲೆ ದಾಳಿ ನಡೆಸಿದ್ದಾರೆ. ಟವರ್ ಗಳನ್ನು ಹಾಳು ಮಾಡದಂತೆ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಪ್ರತಿಭಟನಾಕಾರರಲ್ಲಿ ಮನವಿ ಮಾಡಿದ್ದಾರೆ.
ಕಳೆದ ಎರಡು ದಿನದಲ್ಲೇ ರೈತರು ರಾಜ್ಯದ 150 ಕ್ಕೂ ಹೆಚ್ಚು ಮೊಬೈಲ್ ಸಿಗ್ನಲ್ ಟವರ್ ಗಳನ್ನು ಹಾಳು ಮಾಡಿದ್ದಾರೆ. ಉದ್ಯಮಿಗಳಾದ ಮುಖೇಶ್ ಅಂಬಾನಿ ಹಾಗೂ ಗೌತಮ ಅದಾನಿ ಅವರು ಆಹಾರ ಧಾನ್ಯ ಬೆಳೆಯುವುದಿಲ್ಲ. ಕೇಂದ್ರ ಸರ್ಕಾರ ಜಾರಿಗೆ ತಂದ ಎಪಿಎಂಸಿ ಕಾಯ್ದೆ ತಿದ್ದುಪಡಿ ಅವರಿಗೆ ಅನುಕೂಲವಾಗಲಿದೆ ಎಂಬುದು ರೈತರ ಆರೋಪ. ಇದರಿಂದ ರಿಲಾಯನ್ಸ್ ಜಿಯೋ ಟವರ್ ಗಳನ್ನು ಕೇಂದ್ರವಾಗಿಸಿಕೊಂಡು ರೈತರು ದಾಳಿ ಮಾಡುತ್ತಿದ್ದಾರೆ.
ಇದುವರೆಗೆ 1338 ಟವರ್ ಗಳ ಮೇಲೆ ರೈತರು ದಾಳಿ ಮಾಡಿದ್ದಾರೆ. ಮುಖ್ಯವಾಗಿ ಟವರ್ ಗಳಿಗೆ ನೀಡಿದ್ದ ವಿದ್ಯುತ್ ಸಂಪರ್ಕ ಕಡಿತ ಮಾಡಿದ್ದಾರೆ. ಟವರ್ ನೋಡಿಕೊಳ್ಳುವವರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.