ಮರದ ಕೊಂಬೆಯಿಂದ ಪಕ್ಕದಲ್ಲಿದ್ದ ಕಟ್ಟಡವೊಂದಕ್ಕೆ ಲಾಂಗ್ ಜಂಪ್ ಮಾಡುತ್ತಿರುವ ಮಂಗಣ್ಣನ ವಿಡಿಯೋವೊಂದು ಟ್ವಿಟರ್ನಲ್ಲಿ ಸದ್ದು ಮಾಡುತ್ತಿದೆ. ಈ ವಿಡಿಯೋವನ್ನು IFS ಅಧಿಕಾರಿ ಸುಶಾಂತಾ ನಂದಾ ಹಂಚಿಕೊಂಡಿದ್ದಾರೆ.
ಪಕ್ಕದ ಕಟ್ಟಡದ ಗೋಡೆ ಮೇಲೆ ತಾನಿರುವ ಮರದ ಕೊಂಬೆಯಿಂದ ಯಾವ ಥರ ಹಾರಿದರೆ ಸೇಫ್ ಆಗಿ ಆ ಕಡೆ ಸೇರಿಕೊಳ್ಳಬಹುದು ಎಂದು ಸ್ಕೆಚ್ ಹಾಕಿದ ಮಂಗಣ್ಣ ಒಂದು ಸೂಪರ್ ಪ್ಲಾನ್ ಮಾಡಿ ನೋಡ ನೋಡುತ್ತಲೇ ಹಾರಿಯೇಬಿಡುತ್ತಾನೆ.
ಕೊಂಬೆಯನ್ನು 3-4 ಬಾರಿ ಅಲ್ಲಾಡಿಸಿ, ಅದರಿಂದ ಒಂದು ಫೋರ್ಸ್ ಸೃಷ್ಟಿಸಿ, ತನ್ನ ಜಂಪ್ ಅನ್ನು ಸರಿಯಾಗಿ ಟೈಮ್ ಮಾಡಿದ ಮಂಗನ ಈ ಚತುರತೆಯನ್ನು ಕಂಡ ನೆಟ್ಟಿಗರು ಬಹಳ ಅಚ್ಚರಿಪಟ್ಟಿದ್ದಾರೆ.