ಸಿಬಿಎಸ್ಇ ವಿಭಾಗದಲ್ಲಿ 10 ಹಾಗೂ 12ನೇ ತರಗತಿಗಳಲ್ಲಿ ವ್ಯಾಸಂಗ ಮಾಡೋ ವಿದ್ಯಾರ್ಥಿಗಳ ಮಾರ್ಕ್ಸ್ ಶೀಟ್ಗಳಲ್ಲಿ ಹೆಸರು, ಜಾತಿ, ವಿಳಾಸಗಳಲ್ಲಿ ತಿದ್ದುಪಡಿ ಮಾಡಲು ಅವಕಾಶ ನೀಡಿ ಅಂತಾ ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಷನ್ಗೆ ದೆಹಲಿ ಹೈಕೋರ್ಟ್ ಸಲಹೆ ನೀಡಿದೆ.
ತಿದ್ದುಪಡಿಗೆ ಅವಕಾಶ ನೀಡುವ ಸಂಬಂಧ ಕೋರ್ಟ್ಗೆ ಸಲ್ಲಿಕೆಯಾದ ಪಿಟಿಷನ್ಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಡಿ.ಎನ್. ಪಟೇಲ್ ಹಾಗೂ ಪ್ರತೀಕ್ ಜಲನ್ ನೇತೃತ್ವದ ಪೀಠ ಈ ಸಲಹೆ ನೀಡಿದೆ.
ಪ್ರಮಾಣ ಪತ್ರ ನೀಡುವ ಮುನ್ನ ವಿದ್ಯಾರ್ಥಿಗಳಿಗೆ ನೀಡಲಾಗೋ ಫಾರ್ಮ್ಗಳಲ್ಲಿ ತಿದ್ದುಪಡಿ ಮಾಡಬೇಕು ಎಂದು ಬಯಸೋ ವಿಚಾರಗಳನ್ನ ಬರೆಯಲಿಕ್ಕೆಂದೇ ಒಂದು ಕಾಲಮ್ ನಿಗದಿ ಮಾಡಿ. ಅದರಲ್ಲಿ ವಿದ್ಯಾರ್ಥಿಗಳು ತಮಗೆ ತಮ್ಮ ಮಾರ್ಕ್ಶೀಟ್ನಲ್ಲಿ ವಿವರಣೆ ಹೇಗಿರಬೇಕು ಅಂತಾ ಬರೆದುಕೊಡ್ತಾರೆ. ಅವರ ಹೆಸರು, ಜಾತಿ, ವಿಳಾಸ ಹೇಗೆ ನಮೂದಾಗಬೇಕು ಎಂದು ಬರೆಯೋದು ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಬಿಟ್ಟಿದ್ದು. ನಿಮಗಲ್ಲ ಅಂತಾ ಹೇಳಿದೆ.