alex Certify ಕೋವಿನ್​ ಅಪ್ಲಿಕೇಶನ್ ಕುರಿತು ನಿಮಗೆ ತಿಳಿದಿರಲಿ ಈ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೋವಿನ್​ ಅಪ್ಲಿಕೇಶನ್ ಕುರಿತು ನಿಮಗೆ ತಿಳಿದಿರಲಿ ಈ ಮಾಹಿತಿ

ಕೊರೊನಾ ವೈರಸ್​ ವಿರುದ್ಧ ಶನಿವಾರದಿಂದ ಅಸಲಿ ಹೋರಾಟ ಆರಂಭಿಸಿರುವ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಲಸಿಕೆ ವಿತರಣೆಗೆ ಗ್ರೀನ್​ ಸಿಗ್ನಲ್​ ನೀಡಿದೆ. ಇದರ ಜೊತೆಯಲ್ಲಿ ಕೇಂದ್ರ ಸರ್ಕಾರ ಕೋವಿನ್​ ಎಂಬ ಅಪ್ಲಿಕೇಶನ್​ನ್ನೂ ಅಭಿವೃದ್ಧಿಪಡಿಸಿದೆ.

ಪ್ರಸ್ತುತ ಅಪ್ಲಿಕೇಶನ್​ ಡೌನ್​ಲೋಡ್​ ಮಾಡಿಕೊಳ್ಳಲು ಲಭ್ಯವಿಲ್ಲ. ಪ್ಲೇಸ್ಟೋರ್​ಗಳಲ್ಲಿ ಕೇಂದ್ರ ಸರ್ಕಾರದ ಈ ಅಪ್ಲಿಕೇಶನ್​ ಲಭ್ಯವಾಗುತ್ತಿದ್ದಂತೆಯೇ ದೇಶದ ಜನತೆ ಇದರ ಮೂಲಕ ಲಸಿಕೆಗೆ ನೋಂದಾಯಿಸಿಕೊಳ್ಳಬಹುದಾಗಿದೆ.

ಈ ಅಪ್ಲಿಕೇಶನ್​ ಬಳಕೆಗೆ ಲಭ್ಯವಾದ ಬಳಿಕ ಇದರಲ್ಲಿ ಕೊರೊನಾ ಲಸಿಕೆ ನೋಂದಣಿಗೆ ಮೂರು ಆಯ್ಕೆಗಳು ಲಭಿಸಲಿದೆ. ಸ್ವಯಂ ನೋಂದಣಿ, ವೈಯಕ್ತಿಕ ನೊಂದಣಿ ಹಾಗೂ ಬೃಹತ್​ ಅಪ್​ಲೋಡ್​ ಎಂಬ ಮೂರು ಆಯ್ಕೆಗಳು ಸಿಗಲಿದೆ.

ಹಾಗೆಯೇ ಈ ಅಪ್ಲಿಕೇಶನ್​ನಲ್ಲಿ ನಾಲ್ಕು ಮಾಡ್ಯೂಲ್​ಗಳು ಇರಲಿವೆ. ಇದು ಬಳಕೆದಾರರ ನಿರ್ವಾಹಕ ಮಾಡ್ಯೂಲ್, ಫಲಾನುಭವಿಗಳ ನೋಂದಣಿ, ವ್ಯಾಕ್ಸಿನೇಷನ್ ಮತ್ತು ಫಲಾನುಭವಿಗಳ ಸ್ವೀಕೃತಿ ಮತ್ತು ಸ್ಥಿತಿ ನವೀಕರಣ ಎಂಬ ನಾಲ್ಕು ಮಾಡ್ಯೂಲ್‌ಗಳನ್ನು ಹೊಂದಿರುತ್ತದೆ. ಕೊರೊನಾ ಲಸಿಕೆ ಸ್ವೀಕರಿಸಿದವರ ಮಾಹಿತಿಗಾಗಿ ಈ ಅಪ್ಲಿಕೇಶನ್​ ಸಹಾಯ ಮಾಡುತ್ತೆ.

ಲಸಿಕೆ ನೋಂದಣಿ ಮಾಡುವವರಿಗೆ ಹಾಗೂ ಆರೋಗ್ಯ ಕಾರ್ಯಕರ್ತರಿಗಾಗಿ 12 ಭಾಷೆಗಳ ಮೆಸೇಜ್​ ಒಂದನ್ನ ಕಳುಹಿಸಲಾಗುತ್ತೆ. ಎಲ್ಲಾ ಮಾಹಿತಿಗಳನ್ನ ನೀಡಿದ ಬಳಿಕ ಕ್ಯೂ ಆರ್​ ಕೋಡ್​ ಆಧಾರಿತ ಲಸಿಕೆ ಪ್ರಮಾಣಪತ್ರ ನೀಡಲಾಗುತ್ತೆ. ಹಾಗೂ ಈ ಕ್ಯೂ ಆರ್​ ಕೋಡ್​ನ್ನ ಮೊಬೈಲ್​ ಫೋನ್​ನಲ್ಲಿ ಸೇವ್​ ಮಾಡಿಕೊಳ್ಳುವಂತೆ ಹೇಳಲಾಗಿದೆ.

ಈ ಅಪ್ಲಿಕೇಶನ್​ನ್ನು ನಾವು ಸಾರ್ವಜನಿಕ ಬಳಕೆಗೆ ನೀಡಲಿದ್ದೇವೆ. ಒಂದು ವೇಳೆ ನಿಮ್ಮ ಹೆಸರು ಲಸಿಕೆ ಪಟ್ಟಿಯಲ್ಲಿ ಇಲ್ಲವಾದಲ್ಲಿ ನೀವು ಜಿಲ್ಲಾ ಮಟ್ಟದ ಅಧಿಕಾರಿಗಳನ್ನ ಭೇಟಿಯಾಗಬಹುದಾಗಿದೆ. ಹೃದಯ ಕಾಯಿಲೆ ಹಾಗೂ ಕ್ಯಾನ್ಸರ್​ನಂತಹ ಸಮಸ್ಯೆ ಉಳ್ಳವರು ವೈದ್ಯಕೀಯ ಪ್ರಮಾಣ ಪತ್ರವನ್ನ ಈ ಅಪ್ಲಿಕೇಶನ್​ನಲ್ಲಿ ಅಪ್​ಲೋಡ್​ ಮಾಡಬಹುದು ಎಂದು ದೆಹಲಿ ಕೋವಿಡ್ ಕಾರ್ಯಪಡೆಯ ಸದಸ್ಯೆ ಡಾ. ಸೋನಾಲಿ ಗಾರ್ಗ್​ ಮಾಹಿತಿ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...