ಭೂಮಿಯ ಅತ್ಯಂತ ದುರ್ಗಮ ಪ್ರದೇಶ ಉತ್ತರ ಧ್ರುವದಲ್ಲಿ ಮಹಿಳಾ ಪೈಲಟ್ ಗಳು ನೇತೃತ್ವದಲ್ಲಿ ಏರ್ ಇಂಡಿಯಾ ವಿಮಾನ ಹಾರಾಟ ನಡೆಸಿದೆ.
ಕ್ಯಾಪ್ಟನ್ ಜೋಯಾ ಅಗರವಾಲ್ ನೇತೃತ್ವದ ಮಹಿಳಾ ಪೈಲಟ್ ಗಳ ತಂಡ ಬೋಯಿಂಗ್ 777 ವಿಮಾನವನ್ನು ನಡೆಸುತ್ತಿದೆ. ಸ್ಯಾನ್‌ಫ್ರಾನ್ಸಿಸ್ಕೋದಿಂದ ಹೊರಟು ವಿಶ್ವದ ಅತಿ ಸುದೀರ್ಘ ವಾಯು ಮಾರ್ಗದಲ್ಲಿ 16000 ಕಿಮೀ ಸಂಚರಿಸಲಿದೆ.
ಬೋಯಿಂಗ್ 777 ನಡೆಸಿದ ಮೊದಲ ಮಹಿಳಾ ಪೈಲಟ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಜೋಯಾ ಅಗರವಾಲ್ ತಂಡ ಈಗ ಮತ್ತೊಂದು ಸಾಹಸ ಮಾಡಿದೆ. ಕೋವಿಡ್ ಸಂದರ್ಭದಲ್ಲಿ ಭಾರತೀಯರನ್ನು ಮರಳಿ ಮನೆಗೆ ಕರೆತಂದು ಪ್ರಸಿದ್ಧರಾದ ಮಹಿಳಾ ಪೈಲಟ್ ಗಳ ತಂಡ ಈಗ ಹೊಸ ಸಾಹಸ ಮಾಡಿ ಅಚ್ಚರಿ ಮೂಡಿಸಿದೆ. ಹಲವರು ಉತ್ತರ ಧ್ರುವವನ್ನೇ ನೋಡಿರುವುದಿಲ್ಲ. ನಾವು ಅಂತಲ್ಲಿ ವಿಮಾನ ಚಲಾಯಿಸಲು ಅವಕಾಶ ಸಿಕ್ಕಿದ್ದು ಖುಷಿ ನೀಡಿದೆ ಎಂದು ಜೋಯಾ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.