ಕೋವಿಡ್-19 ಸಾಂಕ್ರಮಿಕದ ನಡುವೆಯೇ ಈ ಬಾರಿ ಸ್ವಾತಂತ್ರ‍್ಯೋತ್ಸವವನ್ನು ಆಚರಿಸಲಾಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಕೆಂಪು ಕೋಟೆಯ ಪ್ರಾಂಗಣದಲ್ಲಿ ನಿಂತು ತ್ರಿವರ್ಣವನ್ನು ಆರೋಹಣ ಮಾಡಿ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ್ದು, ಈ ಬಗ್ಗೆ ಅದಾಗಲೇ ಸಾಕಷ್ಟು ಅಂಶಗಳನ್ನು ಹೈಲೈಟ್ ಮಾಡಿ ಮಾಧ್ಯಮಗಳು ತೋರಿವೆ.
ಆದರೆ, ಪ್ರಧಾನಿ ಭಾಷಣದ ವೇಳೆ ಅವರು ಮಾಡಿದ ಘೋಷಣೆಯೊಂದು ಎಲ್ಲ ನೆಟ್ಟಿಗರ ಮನಗೆದ್ದಿದೆ. ಸ್ಯಾನಿಟರಿ ಪ್ಯಾಡ್‌ಗಳ ಬಗ್ಗೆ ತಮ್ಮ ಭಾಷಣದಲ್ಲಿ ಮಾತನಾಡಿದ ಮೋದಿ, “ನಮ್ಮ ಹೆಣ್ಣುಮಕ್ಕಳು ಹಾಗೂ ಸಹೋದರಿಯರ ಆರೋಗ್ಯದ ಬಗ್ಗೆ ಸರ್ಕಾರ ಯಾವಾಗಲೂ ಕಾಳಜಿ ಹೊಂದಿರುತ್ತದೆ. 6000 ಜನೌಷಧಿ ಕೇಂದ್ರಗಳ ಮೂಲಕ ಮಹಿಳೆಯರಿಗೆ ಕೇವಲ 1 ರೂ. ಬೆಲೆಯಲ್ಲಿ ಸ್ಯಾನಿಟರಿ ಪ್ಯಾಡ್‌ಗಳು ದೊರಕಲಿವೆ” ಎಂದು ತಿಳಿಸಿದ್ದಾರೆ.
ಇದರೊಂದಿಗೆ, ಮಹಿಳೆಯರಲ್ಲಿ ಇರುವ ಅಪೌಷ್ಠಿಕತೆಯ ಸಮಸ್ಯೆಯನ್ನು ಹೋಗಲಾಡಿಸಲು ಮಾಡುತ್ತಿರುವ ಕೆಲಸಗಳ ಬಗ್ಗೆಯೂ, ಜೊತೆಯಲ್ಲಿ ಸಶಶ್ತ್ರ ಪಡೆಗಳ ಮುಂಚೂಣಿ ಹುದ್ದೆಗಳಲ್ಲೂ ಸಹ ಸ್ತ್ರೀಯರಿಗೆ ಅವಕಾಶ ಹಾಗು ಮುಸ್ಲಿಂ ಸಹೋದರಿಯರಿಗೆ ತ್ರಿವಳಿ ತಲಾಖ್ ನಿಷೇಧದ ಮೂಲಕ ದೊಡ್ಡ ರಿಲೀಫ್ ಕೊಟ್ಟಿರುವ ಬಗ್ಗೆ ಸಹ ಪ್ರಧಾನಿ ಗಮನ ಸೆಳೆದಿದ್ದಾರೆ.
https://twitter.com/SunidhiPathak1/status/1294579636530118656?ref_src=twsrc%5Etfw%7Ctwcamp%5Etweetembed%7Ctwterm%5E1294579636530118656%7Ctwgr%5E&ref_url=https%3A%2F%2Fwww.timesnownews.com%2Fthe-buzz%2Farticle%2Findependence-day-2020-pm-modis-sanitary-pads-at-re-1-remark-wins-netizens-over%2F637534