ಕಣ್ಣೂರು: ಅರ್ಧ ರಾತ್ರಿಯಲ್ಲಿ ಬಂದಿಳಿಯುವ ಪ್ರಯಾಣಿಕರಿಗೆ ಕಣ್ಣೂರಿನ ಯುವಕರ ತಂಡವೊಂದು ಊಟ ನೀಡುತ್ತಿದೆ. ಹೌದು, ಕಣ್ಣೂರಿನ ಯುವಕರ ತಂಡದ ಕಾರ್ಯದ ಫೋಟೋವನ್ನು ಅಲಿಂಡಾ ಮೆರಿ ಜಾನ್ ಎಂಬುವವರು ಟ್ವೀಟ್ ಮಾಡಿದ್ದಾರೆ.
ಕೇರಳ ಕೋಯಿಕ್ಕೋಡ್ ವಿಮಾನ ನಿಲ್ದಾಣದಲ್ಲಿ ದುಬೈನಿಂದ ಬಂದು ಇಳಿಯಬೇಕಿದ್ದ ಏರ್ ಇಂಡಿಯಾದ IX-1344 ವಿಮಾನ ಅಪಘಾತಕ್ಕೆ ಒಳಗಾಗಿತ್ತು.
ವಿವಿಧ ದೇಶಗಳಲ್ಲಿ ಸಂಕಷ್ಟಕ್ಕೆ ಸಿಲುಕಿದವರನ್ನು ಸ್ವದೇಶಕ್ಕೆ ಕರೆಸಿಕೊಳ್ಳುವ ವಂದೇ ಭಾರತ್ ಮಿಶನ್ ಅಡಿ ಈ ವಿಮಾನ ಆಗಮಿಸಿತ್ತು.
ಘಟನೆಯಲ್ಲಿ ಇದುವರೆಗೆ ಇಬ್ಬರು ಪೈಲೆಟ್ ಗಳು ಸೇರಿ 18 ಜನ ಸಾವನ್ನಪ್ಪಿದ್ದಾರೆ. ಈ ದುರ್ಘಟನೆಯಿಂದ ಕೋಯಿಕ್ಕೋಡ್ ವಿಮಾನ ನಿಲ್ದಾಣದಲ್ಲಿ ಇಳಿಯಬೇಕಿದ್ದ ಎಲ್ಲ ವಿಮಾನಗಳನ್ನು ಕಣ್ಣೂರಿಗೆ ಸ್ಥಳಾಂತರಿಸಲಾಗಿದೆ. ಕಣ್ಣೂರಿನಲ್ಲಿ ಅಪರಾತ್ರಿಯಲ್ಲಿ ವಿಮಾನಗಳು ಬಂದಿಳಿಯುತ್ತಿವೆ. ಕೊರೊನಾ ವೈರಸ್ ಕಾರಣದಿಂದ ಅವರಿಗೆ ಊಟ ತಿಂಡಿ ಸಮರ್ಪಕವಾಗಿ ಸಿಗುತ್ತಿಲ್ಲ. ಯುವಕರ ತಂಡ ಅವರಿಗೆ ನೆರವಾಗುತ್ತಿದೆ.