alex Certify BIG NEWS: ಕೃಷಿ ಕಾನೂನಿನ ಪರವಾಗಿರುವವರನ್ನೇ ಸಮಿತಿ ಸದಸ್ಯರನ್ನಾಗಿಸಿತಾ ಸುಪ್ರೀಂ ಕೋರ್ಟ್.​..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಕೃಷಿ ಕಾನೂನಿನ ಪರವಾಗಿರುವವರನ್ನೇ ಸಮಿತಿ ಸದಸ್ಯರನ್ನಾಗಿಸಿತಾ ಸುಪ್ರೀಂ ಕೋರ್ಟ್.​..?

ಕೇಂದ್ರ ಸರ್ಕಾರ ಹಾಗೂ ರೈತರ ನಡುವೆ ನಡೆಯುತ್ತಿರುವ ಕೃಷಿ ಮಸೂದೆಯ ಹೋರಾಟದ ಚೆಂಡು ಇದೀಗ ಸುಪ್ರೀಂ ಕೋರ್ಟ್ ಅಂಗಳದಲ್ಲಿದೆ. ಈಗಾಗಲೇ ಕೃಷಿ ಮಸೂದೆಯನ್ನ ವಾಪಾಸ್​ ತೆಗೆದುಕೊಳ್ಳುವಂತೆ ಕೇಂದ್ರಕ್ಕೆ ಸೂಚನೆ ನೀಡಿರುವ ಸುಪ್ರೀಂ ಕೋರ್ಟ್​ ಮಸೂದೆಯ ಸಾಧಕ ಬಾಧಕ ಚರ್ಚೆಗೆ ರೈತರನ್ನೂ ಒಳಗೊಂಡ ಸಮಿತಿ ರಚನೆಗೆ ಮುಂದಾಗಿದ್ದು. ಅಂದಹಾಗೆ ಈ ಸಮಿತಿಗೆ ಸುಪ್ರಿಂ ಕೋರ್ಟ್​ ನೇಮಿಸಿರುವ ನಾಲ್ವರು ಸದಸ್ಯರು ಈ ಹಿಂದೆ ಕೃಷಿ ಕಾನೂನಿನ ಪರ ನಿಲುವನ್ನ ವ್ಯಕ್ತಪಡಿಸಿದ್ದರಂತೆ.

ಕೃಷಿ ಮಸೂದೆ ಸಂಬಂಧಿ ಯಾವುದೇ ಸಮಿತಿಯಲ್ಲಿ ಭಾಗಿಯಾಗೋದಿಲ್ಲ ಎಂದು ಕೃಷಿ ಸಂಘಟನೆಗಳು ಈಗಾಗಲೇ ಸುಪ್ರಿಂ ಕೋರ್ಟ್ ಹಾಗೂ ಕೇಂದ್ರ ಸರ್ಕಾರ ಸ್ಪಷ್ಟ ಸಂದೇಶ ನೀಡಿವೆ. ಈ ಸಮಿತಿಯನ್ನ ನಾವು ಸ್ವೀಕಾರ ಮಾಡೋಕೆ ಸಾಧ್ಯವೇ ಇಲ್ಲ. ಈ ಸಮಿತಿಯು ಕೃಷಿ ಕಾನೂನಿನ ಪರ ಮಾತನಾಡುವ ಸದಸ್ಯರನ್ನೇ ಹೊಂದಿದೆ. ಈ ಸಮಿತಿಯಲ್ಲಿರುವ ಎಲ್ಲಾ ಸದಸ್ಯರು ಸರ್ಕಾರದ ಪರವಾಗಿದ್ದಾರೆ. ಇವರೆಲ್ಲ ಸರ್ಕಾರದ ಕಾನೂನುಗಳನ್ನ ಸಮರ್ಥನೆ ಮಾಡಿಕೊಳ್ತಾರೆ ಅಂತಾ ಪಂಜಾಬ್​ ರೈತ ಸಂಘಟನೆಗಳು ತಿಳಿಸಿವೆ.

ಈ ಪಟ್ಟಿಯಲ್ಲಿ ಭಾರತೀಯ ಕಿಸಾನ್ ಯೂನಿಯನ್ ಮತ್ತು ಅಖಿಲ ಭಾರತ ಕಿಸಾನ್ ಸಮನ್ವಯ ಸಮಿತಿಯ ರಾಷ್ಟ್ರೀಯ ಅಧ್ಯಕ್ಷ ಭೂಪಿಂದರ್ ಸಿಂಗ್ ಮನ್ ಸೇರಿದ್ದಾರೆ, ಕೃಷಿ ಅರ್ಥಶಾಸ್ತ್ರಜ್ಞ ಡಾ.ಪರ್ಮೋದ್ ಕುಮಾರ್ ಜೋಶಿ, ದಕ್ಷಿಣ ಏಷ್ಯಾ, ಅಂತರರಾಷ್ಟ್ರೀಯ ಆಹಾರ ನೀತಿ ಸಂಶೋಧನಾ ಸಂಸ್ಥೆಯ ನಿರ್ದೇಶಕರಾಗಿದ್ದಾರೆ; ಅಶೋಕ್ ಗುಲಾಟಿ, ಕೃಷಿ ಅರ್ಥಶಾಸ್ತ್ರಜ್ಞ ಮತ್ತು ಕೃಷಿ ವೆಚ್ಚ ಮತ್ತು ಬೆಲೆಗಳ ಆಯೋಗದ ಮಾಜಿ ಅಧ್ಯಕ್ಷ, ಮಾಧ್ಯಮಗಳಲ್ಲಿ ಲೇಖನಗಳನ್ನು ಬರೆದ ಶೆಟ್ಕರಿ ಸಂಘಟನದ ಮುಖ್ಯಸ್ಥ ಅನಿಲ್ ಘನ್ವತ್ ಅವರು ಕೃಷಿ ಕಾನೂನುಗಳ ಪರವಾಗಿ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...