ಉತ್ತರ ಪ್ರದೇಶದ ಅಲಿಗಢ ಜಿಲ್ಲೆಯ ಹೋಟೆಲ್ ಒಂದರಲ್ಲಿ ಕ್ವಾರೆಂಟೈನ್ ಆಗಿದ್ದ ವೈದ್ಯರುಗಳು 50 ಲಕ್ಷ ರೂಪಾಯಿ ಮೌಲ್ಯದ ಆಹಾರ ಸೇವನೆ ಮಾಡಿದ ಪ್ರಕರಣ ಬಹಿರಂಗವಾಗಿದೆ. ಈ ಆಘಾತಕಾರಿ ಪ್ರಕರಣವು ಮಂಗಳವಾರ ಕೊರೊನಾ ವ್ಯವಹಾರಗಳ ಪರಿಶೀಲನಾ ಮಂಡಳಿಯ ಮುಂದೆ ಬಂದಿದೆ.
28 ದಿನಗಳಲ್ಲಿ 50 ಲಕ್ಷ ರೂಪಾಯಿಗಳ ಆಹಾರವನ್ನು 84 ವೈದ್ಯರು ಸೇವನೆ ಮಾಡಿದ್ದಾರೆ. ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ. ರಜನೀಶ್ ದುಬೆ ಸೇರಿದಂತೆ ಎಲ್ಲಾ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು. ವೈದ್ಯರು ಬಿಲ್ ನೀಡಿದಾಗ ಇದನ್ನು ನೋಡಿ ಅಲ್ಲಿನ ಅಧಿಕಾರಿಗಳು ದಂಗಾಗಿದ್ದಾರೆ.
ಮಾರ್ಚ್ 20 ರಂದು ಹೋಟೆಲ್ ಪಾಮ್ ಟ್ರೀ ಮತ್ತು ವಿಕಾಸ್ ಹೋಟೆಲ್ ನಲ್ಲಿ ಮೊದಲ ಬ್ಯಾಚ್‌ನ 42 ವೈದ್ಯರನ್ನು 14 ದಿನಗಳ ಕಾಲ ಕ್ವಾರಂಟೈನ್ ಮಾಡಲಾಗಿತ್ತು. ಇದರ ನಂತರ, ಮುಂದಿನ ಬ್ಯಾಚ್‌ನ 42 ವೈದ್ಯರಿಗೆ ಹೋಟೆಲ್ ಗ್ಯಾಲಕ್ಸಿ ಮತ್ತು ಹೋಟೆಲ್ ಅಲಿ ಇನ್ ನಲ್ಲಿ ವಸತಿ ಕಲ್ಪಿಸಲಾಗಿತ್ತು. 28 ದಿನಗಳ ಅವಧಿಯಲ್ಲಿ ವೈದ್ಯರ ಅಡುಗೆಯಿಂದ ಹಿಡಿದು ವಾಸ್ತವ್ಯದವರೆಗೆ 50 ಲಕ್ಷ ರೂಪಾಯಿಗಳ ಬಿಲ್ ಬಹಿರಂಗಗೊಂಡಿದೆ. ಪ್ರತಿ ವೈದ್ಯರಿಂದ ಪ್ರತಿದಿನ ಸುಮಾರು 2126 ರೂಪಾಯಿ ವಸೂಲಿ ಮಾಡಲಾಗಿದೆ.