ಮಹಾರಾಷ್ಟ್ರದ 72 ವರ್ಷದ ವ್ಯಕ್ತಿಯೊಬ್ಬನಿಗೆ ಎರಡು ವಿಭಿನ್ನ ಕೋವಿಡ್ -19 ಲಸಿಕೆ ನೀಡಲಾಗಿದ್ದು, ಆತನ ಕುಟುಂಬಸ್ಥರು ಹಾಗೂ ಅಧಿಕಾರಿಗಳು ಅಡ್ಡ ಪರಿಣಾಮದ ಬಗ್ಗೆ ಕಂಗಾಲಾಗಿದ್ದಾರೆ.
ಜಲ್ನಾ ಜಿಲ್ಲೆಯ ಹಳ್ಳಿಯ ನಿವಾಸಿ ದತ್ತಾತ್ರೇಯ ವಾಗ್ಮೋರೆ ಮಾರ್ಚ್ 22ರಂದು ಮೊದಲ ಡೋಸ್ ಕೊವಾಕ್ಸಿನ್ ಪಡೆದಿದ್ದರು. ಏಪ್ರಿಲ್ 30ರಂದು ಅವರು ಎರಡನೇ ಡೋಸ್ ಕೋವಿಶೀಲ್ಡ್ ಪಡೆದುಕೊಂಡಿದ್ದಾರೆ.
ಲಘುವಾದ ಜ್ವರ, ದೇಹದ ಕೆಲವು ಭಾಗಗಳಲ್ಲಿ ದದ್ದುಗಳು ಸೇರಿದಂತೆ ಸಣ್ಣ ತೊಡಕುಗಳು ಕಂಡು ಬಂದಿವೆ ಎಂದು ವಾಗ್ಮೋರೆ ಅವರ ಮಗ ದಿಗಂಬರ್ ಹೇಳಿದ್ದಾರೆ.
ಪಡಿತರ ಚೀಟಿದಾರರಿಗೆ ಮತ್ತೊಂದು ಗುಡ್ ನ್ಯೂಸ್: ಪೋರ್ಟಬಿಲಿಟಿ ಸೌಲಭ್ಯ-ರೇಷನ್ ಪಡೆಯಲು ಬಯೋಮೆಟ್ರಿಕ್ ವಿನಾಯಿತಿ
ಜ್ವರ ಕಾಣಿಸಿದ್ದರಿಂದ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದು, ಎರಡು ವ್ಯಾಕ್ಸಿನೇಷನ್ ಪ್ರಮಾಣಪತ್ರಗಳನ್ನು ಗಮನಿಸಿದಾಗ ಈ ವ್ಯತ್ಯಯ ಗೊತ್ತಾಗಿದೆ.
ನನ್ನ ತಂದೆ ಅನಕ್ಷರಸ್ಥ ಮತ್ತು ನಾನು ಕೂಡ ಹೆಚ್ಚು ವಿದ್ಯಾವಂತನಲ್ಲ. ನನ್ನ ತಂದೆಗೆ ಯಾವ ಲಸಿಕೆ ಕೊಡಬೇಕೆಂಬುದು ವ್ಯಾಕ್ಸಿನೇಷನ್ ಕೇಂದ್ರದಲ್ಲಿ ಹಾಜರಿದ್ದ ಆರೋಗ್ಯ ಅಧಿಕಾರಿಗಳ ಕರ್ತವ್ಯ ಎಂದು ದಿಗಂಬರ್ ಹೇಳಿದ್ದಾರೆ
ಇದೀಗ ಕುಟುಂಬವು ಅಧಿಕಾರಿಗಳಿಗೆ ದೂರು ನೀಡಿದೆ. ಈ ರೀತಿ ಹೇಗಾಯಿತು ಎಂಬ ಬಗ್ಗೆ ತನಿಖೆ ಪ್ರಾರಂಭವಾಗಿದೆ. ಎರಡು ವಿಭಿನ್ನ ಲಸಿಕೆ ಪಡೆದ ಬಳಿಕ ಅವರಲ್ಲಿ ಆಯಾಸ ಮತ್ತು ತಲೆನೋವಿನಂತಹ ಅಡ್ಡ ಪರಿಣಾಮ ಹೆಚ್ಚಿದೆಯಂತೆ.