ತಮ್ಮ ಪ್ರೀತಿಪಾತ್ರರಿಗಾಗಿ ಏನು ಬೇಕಾದರೂ ಮಾಡಲು ಸಿದ್ಧ ಎನ್ನುವ ಮಟ್ಟಿಗೆ ಜನರು ಹೋಗುತ್ತಾರೆ ಎಂಬುದಕ್ಕೆ ದಿನೇ ದಿನೇ ಬಹಳಷ್ಟು ರೀತಿಯ ನಿದರ್ಶನಗಳು ಕೇಳಿ ಬರುತ್ತಿವೆ. ಅದರಲ್ಲೂ ಜೀವನ ಸಂಗಾತಿಗಳ ವಿಚಾರದಲ್ಲಿ ಈ ಕ್ರೇಜ್ ಇನ್ನೂ ಆಳವಾಗಿದೆ.
ನಾವೆಲ್ಲಾ ರೋಡ್ ಸೈಡ್ ಸೈಟ್ ಖರೀದಿ ಮಾಡಿದರೇ ದೊಡ್ಡ ವಿಷಯ ಎಂದುಕೊಂಡಿರುವ ವೇಳೆ ರಾಜಸ್ಥಾನದ ಅಜ್ಮೇರ್ನ ವ್ಯಕ್ತಿಯೊಬ್ಬರು ತಮ್ಮ ವಿವಾಹ ವಾರ್ಷಿಕೋತ್ಸವದ ಪ್ರಯುಕ್ತ ಮಡದಿಗೆ ಚಂದ್ರನ ಮೇಲೆ ಒಂದಷ್ಟು ಜಾಗವನ್ನು ಖರೀದಿ ಮಾಡಿದ್ದಾರೆ.
ಧರ್ಮೇಂದ್ರ ಅಂಜಿಯಾ ಹೆಸರಿನ ಈ ವ್ಯಕ್ತಿ ಚಂದ್ರನ ಮೇಲೆ ಮೂರು ಎಕರೆ ಜಾಗ ಖರೀದಿ ಮಾಡಿದ್ದು, ತಮ್ಮ ಮಡದಿ ಸಪ್ನಾ ಅಂಜಿಯಾಗೆ ಈ ಜಾಗವನ್ನು ಗಿಫ್ಟ್ ಮಾಡುವ ಮೂಲಕ ತಮ್ಮ ವಿವಾಹದ 8ನೇ ವಾರ್ಷಿಕೋತ್ಸವಕ್ಕೆ ಆಕೆಯನ್ನು ಚಂದ್ರನಲ್ಲಿಗೇ ಕೊಂಡೊಯ್ದಿದ್ದಾರೆ.
ವಾರ್ಷಿಕೋತ್ಸವ ಕಾರ್ಯಕ್ರಮದ ವೇಳೆ ಚಂದ್ರನ ಮೇಲೆ ಜಾಗ ಖರೀದಿ ಮಾಡಿದ ದಾಖಲೆಗಳನ್ನು ಧರ್ಮೇಂದ್ರ ತಮ್ಮ ಮಡದಿಗೆ ಕೈಗೆ ಕೊಟ್ಟಿದ್ದಾರೆ.