ಭಾರತೀಯ ಸಂಸ್ಕೃತಿ ಹಾಗೂ ಮೌಲ್ಯಗಳಿಗೆ ವಿರೋಧವಾದ ರೀತಿಯಲ್ಲಿ ಜಾಹೀರಾತು ನೀಡುತ್ತಿರುವ ಕಾರಣ ಕ್ಯಾಡ್ಬರಿ ಮೊಂಡೆಲೆಝ್ ಇಂಡಿಯಾ ಫುಡ್ಸ್ ಪ್ರೈ.ಲಿ.ನ ಜಾಹೀರಾತಿನ ಮೇಲೆ ನಿಷೇಧ ಹೇರಬೇಕೆಂದು ಆಗ್ರಹಿಸಿ ಅಜ್ಮೇರ್ ವಕೀಲ ಅಮಿತ್ ಗಾಂಧಿ ಗ್ರಾಹಕ ವ್ಯವಹಾರಗಳ ಆಯೋಗಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ಅರ್ಜಿ ಸಲ್ಲಿಸಿದ ಬೆನ್ನಿಗೆ ಕ್ಯಾಡ್ಬರಿ ಕಂಪನಿಗೆ ಈ ವಿಚಾರವಾಗಿ ಮೇ 4ರೊಳಗೆ ಪ್ರತಿಕ್ರಿಯೆ ನೀಡಲು ಗ್ರಾಹಕ ಆಯೋಗ ಸಮನ್ಸ್ ಕೊಟ್ಟಿದೆ.
ತಾತನಿಗೆ ಔಷಧಿ ನೀಡಲು ತಮ್ಮ ಆರು ವರ್ಷದ ಮಗನಿಗೆ ಅಮಿತ್ ಹೇಳಿದಾಗ ಪ್ರತಿಕ್ರಿಯಿಸಿದ ಅವರ ಪುತ್ರ, “ಡ್ಯಾಡ್……ಏನೂ ಮಾಡದೆಯೂ ಸಹ ನಾವು ಜೀವಗಳನ್ನು ಉಳಿಸಬಹುದು” ಎಂದಿದ್ದಾನೆ. ಮಗ ಏನು ಹೇಳುತ್ತಿದ್ದಾನೆ ಎಂಬುದು ಖುದ್ದು ಆತನೇ ಕ್ಯಾಡ್ಬರಿ ಜಾಹೀರಾತು ತೋರುವವರೆಗೂ ಅಮಿತ್‌ಗೆ ಅರ್ಥ ಆಗಿರಲಿಲ್ಲ.
ಒಂದು ʼಡಜನ್ʼ ಕೇಳಿದರೆ 12 ಮಾತ್ರ ಕೊಟ್ಟಿದ್ದೀರಿ ಎಂದು ತಕರಾರು ತೆಗೆದ ಗ್ರಾಹಕನ ಮಾತು ಕೇಳಿ ಅಂಗಡಿ ಮಾಲೀಕ ಸುಸ್ತೋಸುಸ್ತು
ಈ ಘಟನೆಯಿಂದಾಗಿ ಅಮಿತ್ ಕ್ಯಾಡ್ಬರಿ ವಿರುದ್ಧ ಅರ್ಜಿ ಸಲ್ಲಿಸಲು ಮುಂದಾಗಿದ್ದಾರೆ. ವೃದ್ಧ ಮಹಿಳೆಯೊಬ್ಬರ ಕೋರಿಕೆಯೊಂದಕ್ಕೆ ಪುಟ್ಟ ಬಾಲಕನೊಬ್ಬ ನಕಾರಾತ್ಮಕವಾಗಿ ಪ್ರತಿಕ್ರಿಯಿಸಿರುವ ಜಾಹೀರಾತಿನ ವಿರುದ್ಧ ಅಮಿತ್ ಪ್ರಶ್ನೆ ಎತ್ತಿದ್ದು, ಇದರಿಂದ ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾಗುತ್ತಿದೆ ಎಂದಿದ್ದಾರೆ.
ಐದು ಲಕ್ಷ ರೂ.ಗಳ ಪರಿಹಾರವನ್ನು ಕೋರಿರುವ ಅಮಿತ್, ಆ ಜಾಹೀರಾತನ್ನು ಟಿವಿಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಬಿತ್ತರವಾಗದಂತೆ ತಡೆಯಲು ಸಹ ಆಗ್ರಹಿಸಿದ್ದಾರೆ.