alex Certify ‘ಖಾಸಗಿ ಚಾಟ್ ಗಳನ್ನ ಮಾಧ್ಯಮಗಳಲ್ಲಿ ಬಿತ್ತರಿಸೋದು ಅಪಾಯಕಾರಿ’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಖಾಸಗಿ ಚಾಟ್ ಗಳನ್ನ ಮಾಧ್ಯಮಗಳಲ್ಲಿ ಬಿತ್ತರಿಸೋದು ಅಪಾಯಕಾರಿ’

ವಕೀಲ ಪ್ರಶಾಂತ್​ ಭೂಷಣ್​ ವಾಕ್​ ಸ್ವಾತಂತ್ರ್ಯ ದುರುಪಯೋಗ ವಿಚಾರವಾಗಿ ಸುಪ್ರೀಂ ಕೋರ್ಟ್​ನಲ್ಲಿ ಮಾತನಾಡಿದ ಅಟರ್ನಿ ಜನರಲ್​ ಕೆ.ಕೆ. ವೇಣುಗೋಪಾಲ್​ ಮಾಧ್ಯಮಗಳು, ವಾಕ್​ ಸ್ವಾತಂತ್ರ್ಯ ಹಾಗೂ ನ್ಯಾಯಾಲಯಗಳನ್ನ ಅವಮಾನ ಮಾಡುವ ಹೇಳಿಕೆಗಳ ನಡುವಿನ ವ್ಯತ್ಯಾಸವನ್ನು ಅರಿಯಬೇಕಿದೆ ಅಂತಾ ಹೇಳಿದ್ರು.

2009ರಲ್ಲಿ ಖಾಸಗಿ ಪತ್ರಿಕೆಗೆ ಸಂದರ್ಶನ ನೀಡಿದ್ದ ವಕೀಲ ಪ್ರಶಾಂತ್​ ಭೂಷಣ್​ ಸುಪ್ರೀಂಕೋರ್ಟ್​ನ ಅಂದಿನ 16 ನ್ಯಾಯಮೂರ್ತಿಗಳಲ್ಲಿ ಅರ್ಧದಷ್ಟು ಮಂದಿ ಭ್ರಷ್ಟರು ಅಂತಾ ಆರೋಪಿಸಿದ್ದರು.

ಈ ವಿಚಾರವಾಗಿ ನ್ಯಾಯಮೂರ್ತಿಗಳಾದ ಎ.ಎಂ.ಖಾನ್ವಿಲ್ಕರ್, ಬಿ.ಆರ್. ಗವಾಯಿ ಮತ್ತು ಕೃಷ್ಣ ಮುರಾರಿ ನೇತೃತ್ವದ ಪೀಠದ ಎದುರು ಮಾತನಾಡಿದ ಅವ್ರು ವಾಕ್​ ಸ್ವಾತಂತ್ರ್ಯ ಇದೀಗ ಬೇರೆಯ ದಿಕ್ಕಿನಲ್ಲೇ ಸಾಗುತ್ತಿದೆ ಅಂತಾ ಹೇಳಿದ್ರು.

ಇದೇ ವೇಳೆ ಬಾಲಿವುಡ್​ ನಟ ಸುಶಾಂತ್​ ಸಿಂಗ್​ ರಜಪೂತ್​ ಪ್ರಕರಣವನ್ನೂ ಉಲ್ಲೇಖಿಸಿದ ಅಟರ್ನಿ ಜನರಲ್​ ಕೋರ್ಟ್​ನಲ್ಲಿ ಪ್ರಕರಣ ಸಂಬಂಧದ ಜಾಮೀನು ಅರ್ಜಿ ವಿಚಾರಣೆ ನಡೆಯುತ್ತಿದೆ. ಇತ್ತ ಖಾಸಗಿ ಮಾಧ್ಯಮಗಳು ಆರೋಪಿಗಳ ಖಾಸಗಿ ಚಾಟ್​ಗಳನ್ನ ಪ್ರಸಾರ ಮಾಡ್ತಿವೆ. ಈ ರೀತಿ ಖಾಸಗಿ ಚಾಟ್​ಗಳನ್ನ ಟಿವಿ ಚಾನೆಲ್​ಗಳಲ್ಲಿ ಪ್ರಸಾರ ಮಾಡೋದು ಅಪಾಯಕಾರಿ ಅಂತಾ ಅಭಿಪ್ರಾಯಪಟ್ಟರು

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...