ದೆಹಲಿ ವಿಮಾನ ನಿಲ್ದಾಣದಿಂದ ಟೇಕಾಫ್ ಆಗಿದ್ದ ವಿಮಾನವೊಂದರಲ್ಲಿ ಬಾವಲಿ ಕಂಡು ಬಂದ ಕಾರಣ ಅದರ ಪೈಲಟ್ ವಿಮಾನವನ್ನು ಅದೇ ನಿಲ್ದಾಣದಲ್ಲಿ ಲ್ಯಾಂಡ್ ಮಾಡಿದ್ದಾರೆ.
ದಟ್ಟ ಕಣ್ಣು ಹುಬ್ಬು ಹೆಣ್ಣಿನ ಸೌಂದರ್ಯ
ಬೆಳಗಿನ ಜಾವ 2:20ಕ್ಕೆ ದೆಹಲಿಯಿಂದ ನೆವಾರ್ಕ್‌ನತ್ತ ಹೊರಟಿದ್ದ ಈ ವಿಮಾನ ಆಗಸದಲ್ಲಿ ಹಾರಲು ಆರಂಭಿಸಿದ 30 ನಿಮಿಷದಲ್ಲಿ ಒಳಗೆ ಸತ್ತ ಬಾವಲಿ ಕಂಡುಬಂದಿದೆ. ಮೊದಲೇ ಕೋವಿಡ್‌ಗೂ ಬಾವಲಿಗೂ ಸಂಬಂಧವಿರುವ ವರದಿಗಳು ಬಲಗೊಂಡಿರುವ ಹಿನ್ನೆಲೆ ಹಾಗೂ ವಿಮಾನದ ಸುರಕ್ಷತೆ ದೃಷ್ಟಿಯಿಂದ ವಿಮಾನವನ್ನು ಮರಳಿ ದೆಹಲಿ ನಿಲ್ದಾಣದಲ್ಲಿ ಲ್ಯಾಂಡ್ ಮಾಡಲು ವಿಮಾನದ ಕ್ಯಾಪ್ಟನ್ ನಿರ್ಧರಿಸಿದ್ದಾರೆ.
GST ಮಂಡಳಿ ಸಭೆಯಲ್ಲಿ ಮಹತ್ವದ ನಿರ್ಧಾರ – ಕೋವಿಡ್ ಸಾಧನ, ಫಂಗಸ್ ಇಂಜೆಕ್ಷನ್ ಗೆ ತೆರಿಗೆ ವಿನಾಯಿತಿ
ವಿಮಾನದಲ್ಲಿದ್ದ ಪ್ರಯಾಣಿಕರನ್ನು ಮತ್ತೊಂದು ವಿಮಾನಕ್ಕೆ ಶಿಫ್ಟ್ ಮಾಡಿ, ಅವರನ್ನು ಅಲ್ಲಿಂದ ನೆವಾರ್ಕ್‌ಗೆ ಕರೆದೊಯ್ಯಲಾಯಿತು.