alex Certify ಗಾಯತ್ರಿ ಮಂತ್ರ ಪಠಣದಿಂದ ಗುಣವಾಗುತ್ತಾ ಕೊರೊನಾ…? ಮಹತ್ವದ ಸಂಶೋಧನೆ ಕೈಗೊಂಡ AIIMS ವೈದ್ಯರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಾಯತ್ರಿ ಮಂತ್ರ ಪಠಣದಿಂದ ಗುಣವಾಗುತ್ತಾ ಕೊರೊನಾ…? ಮಹತ್ವದ ಸಂಶೋಧನೆ ಕೈಗೊಂಡ AIIMS ವೈದ್ಯರು

ಕೊರೊನಾ ವೈರಸ್​ನ್ನು ನಿಯಂತ್ರಣ ಮಾಡಬೇಕು ಅಂತಾ ಈಗಾಗಲೇ ಲಸಿಕೆಯನ್ನ ದೇಶಾದ್ಯಂತ ನೀಡಲಾಗ್ತಿದೆ. ಈ ನಡುವೆ ದೆಹಲಿ ಏಮ್ಸ್​ ವೈದ್ಯರು ಚಿಕಿತ್ಸೆಯ ಜೊತೆಗೆ ಗಾಯತ್ರಿ ಮಂತ್ರ ಪಠಣ ಹಾಗೂ ಪ್ರಾಣಾಯಾಮದಿಂದ ಕೊರೊನಾ ಸೋಂಕನ್ನ ಕಡಿಮೆ ಮಾಡೋಕೆ ಸಾಧ್ಯವಾ ಎಂಬ ವಿಚಾರದ ಬಗ್ಗೆ ಸಂಶೋಧನೆ ನಡೆಸುತ್ತಿದ್ದಾರೆ.

ಕೊರೊನಾ ವೈರಸ್​​ಗೆ ತುತ್ತಾಗಿರುವ ರೋಗಿಗಳಿಗೆ ಚಿಕಿತ್ಸೆಯನ್ನ ನೀಡೋದಕ್ಕಿಂತ ಮಂತ್ರ ಹಾಗೂ ಪ್ರಾಣಾಯಾಮವು ಕೊರೊನಾ ವಿರುದ್ಧ ಹೆಚ್ಚು ಪರಿಣಾಮಕಾರಿಯಾಗಬಲ್ಲದು ಎನ್ನುವುದು ಈ ಅಧ್ಯಯನದ ಹಿಂದಿನ ಆಲೋಚನೆಯಾಗಿದೆ. ಇದಕ್ಕಾಗಿ ಏಮ್ಸ್ 20 ಮಂದಿ ರೋಗಿಗಳ ಮೇಲೆ ಸಮೀಕ್ಷೆ ನಡೆಸುತ್ತಿದೆ.

ಈ 20 ಮಂದಿ ಕೊರೊನಾ ರೋಗಿಗಳನ್ನ 10 ಮಂದಿಯ 2 ಗುಂಪುಗಳನ್ನಾಗಿ ವಿಂಗಡಿಸಲಾಗಿದೆ. ಮೊದಲನೇ ಗುಂಪು ಕೊರೊನಾ ಚಿಕಿತ್ಸೆಯ ಜೊತೆಗೆ ಬೆಳಗ್ಗೆ ಹಾಗೂ ಸಂಜೆ ಗಾಯಂತ್ರಿ ಮಂತ್ರವನ್ನ ಪಠಿಸೋದು ಹಾಗೂ ಪ್ರಾಣಾಯಾಮವನ್ನ ಮಾಡುತ್ತಿದೆ.

ಎರಡನೇ ಗುಂಪಿನಲ್ಲಿರುವ ರೋಗಿಗಳಿಗೆ ಕೇವಲ ಕೊರೊನಾ ಚಿಕಿತ್ಸೆಯನ್ನ ನೀಡಲಾಗ್ತಿದೆ. ಈ ಎರಡೂ ಗುಂಪುಗಳ ಮೇಲೆ 14 ದಿನಗಳಿಂದ ನಿಗಾ ಇಡಲಾಗಿತ್ತು.
ಆದರೆ 14 ದಿನಗಳ ಬಳಿಕ ಸಂಶೋಧಕರು ಎರಡೂ ಗುಂಪಿನ ರೋಗಿಗಳನ್ನ ಪರಿಶೀಲನೆ ಮಾಡಿದ್ದಾರೆ. ಆದರೆ ಫಲಿತಾಂಶದ ಬಗ್ಗೆ ಇನ್ನಷ್ಟೇ ಮಾಹಿತಿ ಬಹಿರಂಗವಾಗಬೇಕಿದೆ.

 

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...