
ಕೊರೊನಾ ಯುದ್ಧದಲ್ಲಿ ಅನೇಕರು ಸ್ಪೂರ್ತಿಯಾಗಿದ್ದಾರೆ. ತಮ್ಮ ಜೀವ ಮುಡುಪಿಟ್ಟು ಕೊರೊನಾ ಯುದ್ಧದಲ್ಲಿ ಭಾಗಿಯಾಗಿದ್ದಾರೆ. ಸಾವಿರಾರು ವೈದ್ಯರು, ದಾದಿಯರು ವೈಯಕ್ತಿಕ ಜೀವನ ಬದಿಗಿಟ್ಟು ರೋಗಿಗಳ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಏಮ್ಸ್ ನರ್ಸ್ ಕೂಡ ಇದ್ರಲ್ಲಿ ಒಬ್ಬರು.
ಏಮ್ಸ್ ನಲ್ಲಿ ಕೆಲಸ ಮಾಡುವ ರಾಖಿ ಜಾನ್ ಎಂಬ ನರ್ಸ್ ಕೊರೊನಾ ರೋಗಿಗಳ ಸೇವೆಗಾಗಿ ತಮ್ಮ ವೈಯಕ್ತಿಕ ಕೆಲಸವನ್ನು ಬದಿಗಿಟ್ಟಿದ್ದಾರೆ. ರಾಖಿ ಜಾನ್, ಅಜ್ಜಿ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗದೆ ಜನರ ಸೇವೆ ಮಾಡ್ತಿದ್ದಾರೆ. ಕೇರಳದಲ್ಲಿರುವ ಅಜ್ಜಿ ಸಾವನ್ನಪ್ಪಿದ ಸುದ್ದಿ ರಾಖಿ ದುಃಖಕ್ಕೆ ಕಾರಣವಾಗಿದೆ. ಆದ್ರೆ ಅಜ್ಜಿ ಮುಖ ನೋಡಲು ರಾಖಿಗೆ ಸಾಧ್ಯವಾಗಲಿಲ್ಲ.
ಈ ಸಂದರ್ಭದಲ್ಲಿ ರಜೆ ಹಾಕಿದ್ರೆ ರೋಗಿಗಳಿಗೆ ತೊಂದರೆಯಾಗುತ್ತದೆ. ಹಾಗಾಗಿ ಅಜ್ಜಿ ಅಂತ್ಯ ಸಂಸ್ಕಾರಕ್ಕೆ ಹೋಗದಿರಲು ರಾಖಿ ನಿರ್ಧರಿಸಿದ್ದಾರೆ. ರಾಖಿ ಅಜ್ಜಿ ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಒಂದು ದಿನದ ಹಿಂದೆ ಅವರ ಜೊತೆ ಮಾತನಾಡಿದ್ದರು. ರಾಖಿ ತಾಯಿ 8 ವರ್ಷದಲ್ಲಿದ್ದಾಗ ತೀರಿಕೊಂಡಿದ್ದರಂತೆ. ಹಾಗಾಗಿ ರಾಖಿ ಅಜ್ಜಿ ಜೊತೆ ಬೆಳೆದಿದ್ದರು. ಹಾಗಾಗಿ ಅಜ್ಜಿಗೆ ರಾಖಿ ಅಮ್ಮ ಎಂದು ಕರೆಯುತ್ತಿದ್ದರು.