ಮೇ ಒಂದರಿಂದ 18 ವರ್ಷ ಮೇಲ್ಪಟ್ಟವರಿಗೂ ಲಸಿಕೆ ನೀಡಲಾಗ್ತಿದೆ. ದೇಶದಲ್ಲಿ ಲಸಿಕೆಗೆ ಹೆಚ್ಚು ಬೇಡಿಕೆ ಬರ್ತಿದ್ದಂತೆ ಲಸಿಕೆ ಅಭಾವ ಎದುರಾಗಿದೆ. ಈಗಾಗಲೇ ಮೊದಲ ಡೋಸ್ ಪಡೆದವರಿಗೆ ಎರಡನೇ ಡೋಸ್ ಸರಿಯಾದ ಸಮಯದಲ್ಲಿ ಸಿಗ್ತಿಲ್ಲ. ಈ ಮಧ್ಯೆ ಏಮ್ಸ್ ನಿರ್ದೇಶಕ ಡಾ.ರಂದೀಪ್ ಗುಲೇರಿಯಾ, ಹಿರಿಯ ನಾಗರಿಕರಿಗೆ ಮಾತ್ರ ಮೊದಲು ಲಸಿಕೆ ನೀಡಬೇಕೆಂದಿದ್ದಾರೆ. ಇನ್ನು 2 ರಿಂದ 4 ತಿಂಗಳ ನಂತರ ಯುವಕರಿಗೆ ಅಪಾಯಿಂಟ್ಮೆಂಟ್ ನೀಡಬೇಕೆಂದು ಅವರು ಹೇಳಿದ್ದಾರೆ.
ವಯಸ್ಸಾದವರು ಮತ್ತು ಕೊಮೊರ್ಬಿಡಿಟೀಸ್ ನಿಂದ ಬಳಲುತ್ತಿರುವವರು ಕೊರೊನಾ ರೋಗಕ್ಕೆ ಬಲಿಯಾಗ್ತಿರುವುದು ಹೆಚ್ಚು. ಹಾಗಾಗಿ ಅವರಿಗೆ ಹೆಚ್ಚು ಬೇಗ ಲಸಿಕೆ ಹಾಕಬೇಕು. ಇದು ಒಂದು ದಿನ ಅಥವಾ ಒಂದು ತಿಂಗಳಲ್ಲಿ ಆಗುವ ಕೆಲಸವಲ್ಲ. ಹೆಚ್ಚು ಹೆಚ್ಚು ಜನರಿಗೆ ಲಸಿಕೆ ಹಾಕಬಲ್ಲ ಯೋಜನೆ ರೂಪಿಸಬೇಕೆಂದು ಅವರು ಹೇಳಿದ್ದಾರೆ.
ರೋಗ ಲಕ್ಷಣ ಕಂಡು ಬಂದ ತಕ್ಷಣ ಜನರು ಐಸೋಲೇಟ್ ಆಗಬೇಕೆಂದು ಅವರು ಹೇಳಿದ್ದಾರೆ. ನೆಗಡಿ, ಶೀತ, ಜ್ವರ, ಗಂಟಲು ನೋವಿನಿಂದ ಬಳಲುವ ಬಹುತೇಕರು ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. ಹಾಗಾಗಿ ಈ ಲಕ್ಷಣ ಕಂಡು ಬರ್ತಿದ್ದಂತೆ ಐಸೋಲೇಟ್ ಆಗಬೇಕೆಂದು ಅವರು ಹೇಳಿದ್ದಾರೆ.