ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಈ ನಡುವೆ ರಾಜಕೀಯ ನಾಯಕರು ಅಬ್ಬರದ ಪ್ರಚಾರ ನಡೆಸಿದ್ದಾರೆ. ಅಭ್ಯರ್ಥಿಗಳು ಮತದಾರರ ಓಲೈಕೆಗಾಗಿ ಭರವಸೆಗಳ ಮೇಲೆ ಭರವೆಗಳನ್ನು ನೀಡಿ ಏನೆಲ್ಲ ಸರ್ಕಸ್ ಗಳನ್ನು ಮಾಡುತ್ತಾರೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಎಐಎಡಿಎಂಕೆ ಪಕ್ಷದ ಅಭ್ಯರ್ಥಿಯೊಬ್ಬರು ಚುನಾವಣಾ ಪ್ರಚಾರದ ವೇಳೆ ಮಹಿಳೆಯ ಬಟ್ಟೆ ಒಗೆದು ಮತಯಾಚಿಸಿ ಗಮನ ಸೆಳೆದಿದ್ದಾರೆ.
ಎಐಎಡಿಎಂಕೆ ಅಭ್ಯರ್ಥಿ ತಂಗ ಕಾತಿರವನ್, ನಾಗೋರ್ ಬಳಿ ವಂದಿಪೆಟ್ಟೈನಲ್ಲಿ ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದ್ದು, ಈ ವೇಳೆ ಮಹಿಳೆಯೊಬ್ಬರು ತಮ್ಮ ಕುಟುಂಬದವರ ಬಟ್ಟೆ ಒಗೆಯುತ್ತಿರುವುದನ್ನು ನೋಡಿದ್ದಾರೆ. ಮಹಿಳೆಯ ಬಳಿಗೆ ತೆರಳಿ ತಾವು ಬಟ್ಟೆ ಒಗೆದುಕೊಡುವುದಾಗಿ ಹೇಳಿ, ಆಕೆ ಒಗೆಯುತ್ತಿದ್ದ ಬಟ್ಟೆಗಳನ್ನು ಪಡೆದು ರಸ್ತೆಬದಿ ಕುಳಿತು ಬಟ್ಟೆ ಒಗೆದಿದ್ದಾರೆ. ಬಳಿಕ ಪಕ್ಕದಲ್ಲಿ ರಾಶಿ ಹಾಕಿದ್ದ ಪಾತ್ರೆಗಳನ್ನು ಕೂಡ ತೊಳೆದಿದ್ದಾರೆ.
ರಮೇಶ್ ಜಾರಕಿಹೊಳಿ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿ – ಹೈಕೋರ್ಟ್ ನ್ಯಾಯಾಧೀಶರ ಮೇಲುಸ್ತುವಾರಿಯಲ್ಲಿ ತನಿಖೆ ನಡೆಸಲಿ: ಸಿದ್ದರಾಮಯ್ಯ ಆಗ್ರಹ
ಈ ಬಗ್ಗೆ ಪ್ರತಿಕ್ರಿಯಿಸಿದ ತಂಗ ಕಾತಿರವನ್, ನಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ವಾಷಿಂಗ್ ಮಷಿನ್ ನೀಡುವ ಭರವಸೆ ನೀಡಿದ್ದರಿಂದ ಅದನ್ನು ಸೂಚಿಸುವ ಸಲುವಾಗಿ ಬಟ್ಟೆ ಒಗೆದು ತೋರಿಸಿದ್ದೇನೆ. ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಪ್ರಣಾಳಿಕೆಯಲ್ಲಿನ ಎಲ್ಲಾ ಭರವಸೆ ಈಡೇರಿಸುವುದಾಗಿ ತಿಳಿಸಿದರು.