ಅಹಮದಾಬಾದ್ ನ ಅಶ್ವಿನ್ ಠಕ್ಕರ್ ಎಂಬ ದೃಷ್ಟಿದೋಷದಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ನಗರದ ಹೊಟೇಲ್ ಒಂದರಲ್ಲಿ ದೂರವಾಣಿ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದರು. ಆದರೆ ನಾವೆಲ್ ಕೊರೊನಾ ವೈರಸ್ ಹಾವಳಿಯಿಂದ ಅವರೀಗ ಕೆಲಸ ಕಳೆದುಕೊಂಡಿದ್ದಾರೆ.
ಆದರೆ ಇದರಿಂದ ಎದೆಗುಂದದ ಅಶ್ವಿನ್, ತಮ್ಮ ಕುಟುಂಬಕ್ಕೆ ನೆರವಾಗಲು ತಮ್ಮದೇ ಆದ ಹೊಸ ಬ್ಯಸಿನೆಸ್ ಆರಂಭಿಸಿದ್ದಾರೆ. ತಮ್ಮ ಮಡದಿಯೊಂದಿಗೆ ಸ್ಟಾಲ್ ಗಳನ್ನು ಸ್ಥಾಪಿಸಿ ಹಣ್ಣುಗಳನ್ನು ಮಾರಾಟ ಮಾಡುತ್ತಿರುವ ಅಶ್ವಿನ್, ಜೊತೆಗೆ ಮನೆಯಲ್ಲಿ ಮಾಡಿದ ಕುರುಕಲು ತಿಂಡಿಗಳನ್ನು ಮಾರಾಟ ಮಾಡಿಕೊಂಡು ಹೊಸ ಜೀವನೋಪಾಯ ಕಂಡುಕೊಂಡಿದ್ದಾರೆ.
“ನಾನು ಮೊದಲು ಕೈರಿ (ಹಸಿ ಮಾವಿನಹಣ್ಣು) ಮಾರಾಟ ಮಾಡಲು ಆರಂಭಿಸಿದೆ. ಬಳಿಕ ಒಣ ಖರ್ಜೂರಗಳ ಮಾರಾಟ ಮಾಡುವುದರೊಂದಿಗೆ ಗುಜರಾತೀ ಕುರುಕಲು ತಿಂಡಿಗಳನ್ನು ಮಾರಲು ಶುರು ಮಾಡಿಕೊಂಡೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಆತ್ಮನಿರ್ಭರ ಕರೆಯಿಂದ ಪ್ರೇರಿತನಾಗಿದ್ದೇನೆ. ನನಗೆ ನೋಡಲು ಕಷ್ಟವಾಗುತ್ತದೆ. ಬಹಳಷ್ಟು ಜನರು ನನಗೆ ಸಹಾಯ ಮಾಡಲು ಬರುತ್ತಾರೆ. ಪ್ರತಿಯೊಬ್ಬರಲ್ಲೂ ಪ್ರತಿಭೆಯಿದ್ದು, ಶ್ರಮದಿಂದ ಕೆಲಸ ಮಾಡಿದಲ್ಲಿ ಯಶಸ್ಸು ಸಾಧಿಸುತ್ತಾರೆ” ಎಂದು ಹೇಳುತ್ತಾರೆ ಅಶ್ವಿನ್.