alex Certify ಕೋವಿಡ್ ರೋಗಿಯ ಸಾವಿಗೆ ಕಾರಣವಾದ ಆಸ್ಪತ್ರೆಗೆ 77 ಲಕ್ಷ ರೂ. ದಂಡ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೋವಿಡ್ ರೋಗಿಯ ಸಾವಿಗೆ ಕಾರಣವಾದ ಆಸ್ಪತ್ರೆಗೆ 77 ಲಕ್ಷ ರೂ. ದಂಡ

ಖಾಸಗಿ ಆಸ್ಪತ್ರೆಯಲ್ಲಿ 73 ವರ್ಷದ ಕೊರೊನಾ ವೈರಸ್ ಪಾಸಿಟಿವ್ ಇದ್ದ ವ್ಯಕ್ತಿ ಜೀವ ಕಳೆದುಕೊಂಡಿದ್ದು, ಈ ಸಾವಿಗೆ ಆಸ್ಪತ್ರೆ ನಿರ್ಲಕ್ಷ ಕಾರಣ ಎಂದು 77 ಲಕ್ಷ ರೂ. ದಂಡ ವಿಧಿಸಲಾಗಿದೆ.

ಆಸ್ಪತ್ರೆಗೆ 25 ಲಕ್ಷ ರೂ., ಎಂಟು ಆಡಳಿತ ಮಂಡಳಿ ಸದಸ್ಯರಿಗೆ ತಲಾ 2 ಲಕ್ಷ ರೂ. ಮತ್ತು ಹದಿನೆಂಟು ಟ್ರಸ್ಟಿಗಳಿಗೆ 36 ಲಕ್ಷ ಸೇರಿ ಒಟ್ಟು 77 ಲಕ್ಷ ದಂಡ ವಿಧಿಸಿದ್ದೇವೆ. ಕ್ರಿಮಿನಲ್ ಪ್ರಕರಣ ಕೂಡಾ ದಾಖಲಿಸಲಾಗಿದೆ ಎಂದು ಅಹಮದಾಬಾದ್ ಪಾಲಿಕೆ ತಿಳಿಸಿದೆ.

ಈ ಪ್ರಕರಣ ಹೈಕೋರ್ಟ್ ಮುಂದೆ ಬಂದಿದ್ದು, ಜವಾಬ್ದಾರಿಯುತ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪಾಲಿಕೆಗೆ ಸೂಚಿಸಿತ್ತು. ಜೂನ್ 18ರಂದು ಕೋವಿಡ್-19 ರೋಗಿಯನ್ನು ಬೇರೆ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು, ಅವರಿಗೆ ವೆಂಟಿಲೇಟರ್ ಬೆಂಬಲದ ಅವಶ್ಯಕತೆಯಿತ್ತು. ಆದರೆ ಆಸ್ಪತ್ರೆಯ ದ್ವಾರದಲ್ಲಿ 20 ನಿಮಿಷ ಕಾಯಿಸಲಾಯಿತು. ಕೊರೋನಾ ಸೋಂಕಿತನಿಗೆ ಆಸ್ಪತ್ರೆ ಗೇಟ್ ತೆರೆಯಲು ಸಿಬ್ಬಂದಿ ತಡಮಾಡಿದ್ದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...