alex Certify ಆಗ್ರಾದ ತಾಜ್ ಮಹಲ್ ಕುರಿತು ಪ್ರವಾಸಿಗರಿಗೆ ಇಲ್ಲಿದೆ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಗ್ರಾದ ತಾಜ್ ಮಹಲ್ ಕುರಿತು ಪ್ರವಾಸಿಗರಿಗೆ ಇಲ್ಲಿದೆ ಮಾಹಿತಿ

ತಾಜ್ ಮಹಲ್ ಮೊದಲಾದ ಐತಿಹಾಸಿಕ ಕಟ್ಟಡಗಳನ್ನು ಹೊಂದಿರುವ ಆಗ್ರಾ ವಿಶ್ವ ವಿಖ್ಯಾತ ಪ್ರವಾಸಿ ತಾಣವಾಗಿದೆ. ಮೊಘಲರ ಕಾಲದ ಸುಂದರ ಸ್ಮಾರಕಗಳು ಇಲ್ಲಿದ್ದು, ವಾಸ್ತುಶಿಲ್ಪ ಕಲೆಗೆ ಹೆಸರಾಗಿವೆ.

1526 ರಲ್ಲಿ ಮೊಘಲ್ ಸಾಮ್ರಾಜ್ಯದ ಸಂಸ್ಥಾಪಕ ಬಾಬರನ ವಶವಾದ ಆಗ್ರಾದಲ್ಲಿ 1571 ರಲ್ಲಿ ಅಕ್ಬರ್ ಕೋಟೆ ಕಟ್ಟಿಸಿದ. ಜಹಾಂಗೀರ್, ಷಹಜಹಾನ್ ಕಾಲದಲ್ಲಿ ಹಲವು ಕಟ್ಟಡ ನಿರ್ಮಾಣವಾದವು. 1803 ರಲ್ಲಿ ಈಸ್ಟ್ ಇಂಡಿಯಾ ಕಂಪನಿಯ ವಶಕ್ಕೆ ಬಂದಿತು. ಬ್ರಿಟಿಷರ ವಾಯುವ್ಯ ಪ್ರಾಂತ್ಯದ ರಾಜಧಾನಿಯಾಯಿತು.

ಷಹಜಹಾನ್ ತನ್ನ ಪ್ರೀತಿಯ ಮಡದಿ ಮುಮ್ತಾಜ್ ಸ್ಮರಣೆಯಲ್ಲಿ ತಾಜ್ ಮಹಲ್ ನಿರ್ಮಿಸಿದ. ಯಮುನಾ ನದಿ ತೀರದಲ್ಲಿ ಅಮೃತಶಿಲೆಯಿಂದ ನಿರ್ಮಿಸಿರುವ ಭವ್ಯ ಸ್ಮಾರಕವನ್ನು ವರ್ಣಿಸಲು ಪದಗಳೇ ಸಾಲದು. ಸುಮಾರು 22 ವರ್ಷಗಳ ಕಾಲ ಇದನ್ನು ನಿರ್ಮಿಸಲಾಗಿದೆ ಎನ್ನಲಾಗಿದೆ.

ತಾಜ್ ಮಹಲ್ ವಿಶ್ವದ ಪ್ರಸಿದ್ಧ ಸ್ಮಾರಕಗಳಲ್ಲಿ ಒಂದಾಗಿದೆ. ಅಸಂಖ್ಯಾತ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ಇನ್ನು ಆಗ್ರಾದಲ್ಲಿ ನೋಡಬಹುದಾದ ಮತ್ತೊಂದು ಪ್ರಮುಖ ಸ್ಥಳ ಕೋಟೆ. ಚಕ್ರವರ್ತಿ ಅಕ್ಬರ್ 1565 ರಲ್ಲಿ ಕಟ್ಟಿಸಿದ ಕೋಟೆಯಲ್ಲಿ ಅನೇಕ ಮಹಲುಗಳಿವೆ.

ಕೆಂಪುಕಲ್ಲಿನಲ್ಲಿ ನಿರ್ಮಾಣವಾದ ಕೋಟೆ ವೈಭವವನ್ನು ನೆನಪಿಸುತ್ತದೆ. ಜಹಂಗೀರ್ ಮತ್ತು ಷಹಜಹಾನ್ ಆಗ್ರಾದಲ್ಲಿ ಅನೇಕ ಕಟ್ಟಡಗಳನ್ನು ನಿರ್ಮಿಸಿದ್ದಾರೆ. ಶೀಶ್ ಮಹಲ್, ಖಾಸ್ ಮಹಲ್, ದಿವಾನ್ ಎ ಆಮ್, ಮೋತಿ ಮಸೀದಿ, ನಗೀನ ಮಸೀದಿ, ರಾಮ್ ಭಾಗ್ ಉದ್ಯಾನ, ಸ್ವಾಮಿ ಭಾಗ್, ಸಿಕಂದರಾ ಸ್ಮಾರಕ ಮೊದಲಾದವು ನೋಡಬಹುದಾದ ಸ್ಥಳಗಳಾಗಿವೆ.

ದೇಶದ ವಿವಿಧ ಸ್ಥಳಗಳಿಂದ ಇಲ್ಲಿಗೆ ರೈಲು, ವಿಮಾನ ಸಂಪರ್ಕವಿದೆ. ಮೊದಲೇ ಮಾಹಿತಿ ಪಡೆದುಕೊಂಡು ಹೋದರೆ ಅನುಕೂಲವಾಗುತ್ತದೆ. ಪ್ರವಾಸೋದ್ಯಮ ಇಲಾಖೆಯಿಂದ ಅಗತ್ಯ ಮಾಹಿತಿ ಪಡೆದುಕೊಳ್ಳಬಹುದಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...