ಆಗ್ರಾದ ಸರೋಜಿನಿ ನಾಯ್ಡು ವೈದ್ಯಕೀಯ ಕಾಲೇಜಿನಿಂದ ಎಂಬಿಬಿಎಸ್ ಪದವಿ ಪಡೆದ ಯುವ ವೈದ್ಯರನ್ನು ಕ್ರೂರವಾಗಿ ಹತ್ಯೆ ಮಾಡಲಾಗಿದೆ. ಈ ಪ್ರಕರಣದಲ್ಲಿ ಆಗ್ರಾ ಪೊಲೀಸರು ವೈದ್ಯನನ್ನು ಬಂಧಿಸಿದ್ದಾರೆ. ಡಾ.ವಿವೇಕ್ ತನ್ನ ಸಹೋದ್ಯೋಗಿ ವೈದ್ಯೆಯನ್ನು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಆಗ್ರಾದ ಹೊರ ವಲಯದ ಖಾಲಿ ಫ್ಲಾಟ್ ನಲ್ಲಿ ಶವ ಸಿಕ್ಕಿತ್ತು. ಬೆಳಿಗ್ಗೆ ಸಿಕ್ಕ ಶವದ ಗುರುತು ಸಂಜೆ ಪತ್ತೆಯಾಗಿತ್ತು. ವೈದ್ಯೆ ಯೋಗಿತಾ ಹತ್ಯೆಯಾದ ವೈದ್ಯೆ ಎಂಬುದನ್ನು ಪೊಲೀಸರು ಪತ್ತೆ ಹಚ್ಚಿದ್ದರು. ಯೋಗಿತಾ ಫೋನ್ ಸಿಗ್ತಿಲ್ಲ ಎಂಬ ಕಾರಣಕ್ಕೆ ಕಂಗಾಲಾಗಿದ್ದ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದರು. ದೆಹಲಿ ವಾಸಿಗಳಾದ ಕುಟುಂಬಸ್ಥರು ಅದೇ ದಿನ ಆಗ್ರಾಕ್ಕೆ ಬಂದಿದ್ದರು.
ವೈದ್ಯ ವಿವೇಕ್ ಮಗಳಿಗೆ ಹಿಂಸೆ ನೀಡ್ತಿದ್ದ ಎಂದು ಕುಟುಂಬಸ್ಥರು ಆರೋಪ ಮಾಡಿದ್ದರು. ಸುತ್ತಲಿನ ಸಿಸಿ ಟಿವಿ ಪರಿಶೀಲಿಸಿದ ಪೊಲೀಸರು ವಿವೇಕ್ ನನ್ನು ವಶಕ್ಕೆ ಪಡೆದಿದ್ದಾರೆ. ಯೋಗಿತಾ ಮರಣೋತ್ತರ ಪರೀಕ್ಷೆಯಲ್ಲಿ ಕತ್ತು, ತಲೆಗೆ ಗಾಯವಾಗಿದೆ. ಸಾಯುವ ಮುನ್ನ ಜೀವ ಉಳಿಸಿಕೊಳ್ಳಲು ಯೋಗಿತಾ ಹೆಣಗಾಡಿದ್ದಾಳೆಂದು ವೈದ್ಯರು ಹೇಳಿದ್ದಾರೆ.