ಗೋರಖ್ಪುರದಲ್ಲಿ ಜರುಗಿದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ 53 ವರ್ಷದ ತಾಯಿ ಹಾಗೂ 27 ವರ್ಷದ ಮಗಳು ತಮ್ಮ ಪತಿಯರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ವಿಚಿತ್ರ ಘಟನೆ ಜರುಗಿದೆ.
25 ವರ್ಷಗಳ ಹಿಂದೆ ಪತಿಯನ್ನ ಕಳೆದುಕೊಂಡಿದ್ದ ಬೇಲಿ ದೇವಿ ತನ್ನ ದಿವಂಗತ ಪತಿಯ ಕಿರಿಯ ಸಹೋದರ ಜಗದೀಶ್ (55)ರನ್ನ ವಿವಾಹವಾಗಿದ್ದಾರೆ. ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಒಟ್ಟು 63 ಮಂದಿ ಮದುವೆಯಾದ್ರು.
ಇನ್ನು ಇದೇ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಬೇಲಿ ದೇವಿಯ ಕಿರಿಯ ಪುತ್ರಿ ಕೂಡ ಕೃಷಿಕರಾದ ಜಗದೀಶ್ ಎಂಬವರ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಇನ್ನು ಈ ವಿಚಾರವಾಗಿ ಮಾತನಾಡಿದ ಬೇಲಿ ದೇವಿ, ನನ್ನ ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರು ಈಗಾಗಲೇ ಮದುವೆಯಾಗಿದ್ದಾರೆ. ಹೀಗಾಗಿ ನಾನು ನನ್ನ ಕಿರಿಯ ಪುತ್ರಿಯೊಂದಿಗೆ ವಿವಾಹವಾಗಲು ಇಚ್ಚಿಸಿದೆ. ನನ್ನ ಈ ನಿರ್ಧಾರದಿಂದ ನನ್ನ ಮಕ್ಕಳು ಸಂತೋಷಗೊಂಡಿದ್ದಾರೆ ಎಂದು ಹೇಳಿದ್ರು.