
ಈ ವಿಡಿಯೋದಲ್ಲಿ ಯಾದವ್ ಮದುವೆ ಮನೆಗೆ ಬಂದು ವಿವಾಹ ಕಾರ್ಯಕ್ರಮವನ್ನ ರದ್ದು ಮಾಡುವಂತೆ ಹೇಳಿದ್ದಾರೆ. ಅಲ್ಲದೇ ಕೊರೊನಾ ಮಾರ್ಗಸೂಚಿಯ ಉಲ್ಲಂಘನೆಯಾಗಿದ್ದು ಗಮನಕ್ಕೆ ಬಾರದ ಕಾರಣ ಸ್ಥಳೀಯ ಪೊಲೀಸರನ್ನೂ ತರಾಟೆಗೆ ತೆಗೆದುಕೊಂಡಿದ್ದಾರೆ.
ತನ್ನ ಸಮೀಪದಲ್ಲೇ ನಿಂತಿದ್ದ ಪೊಲೀಸ್ ಅಧಿಕಾರಿ ಕಡೆ ನೋಡಿ ಮಾತನಾಡಿದ ಯಾದವ್, ಇಲ್ಲಿರುವ ಎಲ್ಲರೂ ಸೆಕ್ಷನ್ 144ನ್ನು ಉಲ್ಲಂಘಿಸಿದ್ದಾರೆ. ಇವರೆಲ್ಲರನ್ನೂ ಈ ಕೂಡಲೇ ಬಂಧಿಸಲಾಗುವುದು. ಅಲ್ಲದೇ ಪಶ್ಚಿಮ ಅಗರ್ತಲಾ ಪೊಲೀಸ್ ಠಾಣೆಯ ಒಸಿಯನ್ನ ಅಮಾನತು ಮಾಡುವಂತೆ ಸರ್ಕಾರಕ್ಕೆ ಶಿಫಾರಸ್ಸು ಮಾಡೋದಾಗಿ ಹೇಳಿದ್ದಾರೆ.
ಆದರೆ ಐಎಎಸ್ ಅಧಿಕಾರಿಯ ದುವರ್ತನೆ ಕೈಗಾರಿಕೋದ್ಯಮಿ ನವೀನ್ ಜಿಂದಾಲ್ ಸೇರಿದಂತೆ ಅನೇಕರನ್ನ ಕೆರಳಿಸಿದೆ. ಈ ವಿಚಾರವಾಗಿ ಟ್ವೀಟ್ ಮಾಡಿರುವ ಜಿಂದಾಲ್, ಇದೊಂದು ಐಎಎಸ್ ಅಧಿಕಾರಿಯ ದುರ್ವರ್ತನೆಯ ಪರಮಾವಧಿಯಾಗಿದೆ. ಕೊರೊನಾ ಮಾರ್ಗಸೂಚಿಗಳನ್ನ ಪಾಲನೆ ಮಾಡಿರುವ ಬಗ್ಗೆ ಪರಿಶೀಲನೆ ಮಾಡಲಿ. ಆದರೆ ಜನರ ಮೇಲೆ ಹಲ್ಲೆ ನಡೆಸೋದು ಸರಿ ಅಲ್ಲ. ಈ ಅಧಿಕಾರಿಯ ವಿರುದ್ಧ ತ್ರಿಪುರ ಸಿಎಂ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಬರೆದಿದ್ದಾರೆ.