ಕೊರೊನಾ ವೈರಸ್ ನಡುವೆಯೂ ಭ್ರಷ್ಟಾಚಾರ ಬೇರು ಬಿಡಲು ಅವಕಾಶಗಳನ್ನು ಸೃಷ್ಟಿಸಿಕೊಳ್ಳುತ್ತಿದೆ. ಲಾಕ್ಡೌನ್ ನಿಯಮ ಉಲ್ಲಂಘಿಸಿದ ಕಾರಣಕ್ಕೆ ಬಂಧಿಸುತ್ತೇವೆ, ಬಂಧನ ಬೇಡವೆಂದರೆ ಐವತ್ತು ಸಾವಿರ ರೂ. ಲಂಚ ಕೊಡಬೇಕೆಂದು ಬೇಡಿಕೆ ಇಟ್ಟ ಪೊಲೀಸರು ಸಿಕ್ಕಿಬಿದ್ದಿದ್ದಾರೆ.
ಪುಣೆಯಲ್ಲಿ ಅಂಗಡಿ ಮಾಲೀಕನೊಬ್ಬ ಲಾಕ್ ಡೌನ್ ಮಾನದಂಡ ಉಲ್ಲಂಘಿಸಿದ್ದನ್ನು ಪೊಲೀಸರು ಪತ್ತೆ ಮಾಡಿದ್ದರು. ಜತೆಗೆ ನಿಯಮ ಉಲ್ಲಂಘಿಸಿದ್ದಕ್ಕೆ ತಮ್ಮನ್ನು ಬಂಧಿಸುತ್ತೇವೆ, ಇಲ್ಲವಾದರೆ 50000 ಕೊಡಬೇಕೆಂದು ಬೇಡಿಕೆಯಿಟ್ಟರು.
ಆದರೆ ಚಾಲಕಿ ಅಂಗಡಿಯಾತ ಎಸಿಬಿ ಮೊರೆ ಹೋಗಿದ್ದ. ಹೀಗಾಗಿ ಮಹಾರಾಷ್ಟ್ರ ಭ್ರಷ್ಟಾಚಾರ ನಿಗ್ರಹ ದಳದ ಪುಣೆ ಘಟಕ ಲಂಚ ಕೇಳಿದ ಪೊಲೀಸರನ್ನು ಬಂಧಿಸಿದೆ. ಲಂಚ ಕೇಳಿದ್ದ ಮಾಲ್ವಾಡಿ ಠಾಣೆಯ ಹವಾಲ್ದಾರ್ ವಿಲಾಸ್ ಮೋಹನ್ ಟೋ ಮತ್ತು ಬಾಳಾಸಾಹೇನ್ ಚವಾಣ್ ಬಂಧಿತರು.