
ಗುಲಾಬ್ ಜಾಮೂನ್ – ಪಾವ್, ನ್ಯೂಟೆಲ್ಲಾ – ಬಿರ್ಯಾನಿ,
ಓರಿಯೋ – ಸಮೋಸಾ ಮುಂತಾದ ಕಾಂಬಿನೇಷನ್ ಗಳ ಫೋಟೋಗಳು ಹರಿದಾಡುತ್ತಿವೆ.
ಆದರೆ, ನೆಟ್ಟಿಗರು ಸಾಂಪ್ರದಾಯಿಕ ತಿನಿಸುಗಳಿಗೆ ಅತಿರೇಕದ ತದ್ವಿರುದ್ಧದ ಕಾಂಬಿನೇಷನ್ ಮಾಡಿ ತಿನ್ನಲು ಇಷ್ಟಪಡುತ್ತಿಲ್ಲ. ಇನ್ನೂ ನಮ್ಮ ಆಹಾರ ಪದ್ಧತಿಯಲ್ಲಿ ಸ್ಥಾನ ಪಡೆಯದ ವಸ್ತುಗಳನ್ನೇ ಬದಲಾಯಿಸುತ್ತಿದ್ದಾರೆ.
ಇತ್ತೀಚೆಗೆ ಪ್ರಸಿದ್ಧವಾದ ನ್ಯೂಟೆಲ್ಲಾ ಬಿರ್ಯಾನಿಯಲ್ಲಿ ಚಾಕಲೇಟ್ ಸೇರಿಸಲಾಗಿದೆ. ಆದರೆ, ನ್ಯುಟೆಲ್ಲಾ ಇಲ್ಲಿ ತನ್ನ ಅಸ್ತಿತ್ವ ಕಳೆದುಕೊಂಡಿದೆ. ಇದಕ್ಕೂ ಮುಂಚೆ ಸಮೋಸಾದ ಒಳಗೆ ಓರಿಯೋ ಐಸ್ ಕ್ರೀಮ್ ತುಂಬಿ ಮಾಡಿದ ತಿಂಡಿಯನ್ನೂ ನೆಟ್ಟಿಗರು ತಿರಸ್ಕರಿಸಿದ್ದರು. ಈಗ ಗೋಲ್ ಗಪ್ಪಾ ಅಥವಾ ಪಾನಿ ಪುರಿಯಲ್ಲಿ ಮ್ಯಾಗಿ ತುಂಬಿದ ಫೋಟೋವೊಂದು ಟ್ವಿಟರ್ ನಲ್ಲಿ ಹರಿದಾಡುತ್ತಿದೆ.