ಮಹಾರಾಷ್ಟ್ರದ ನಾಗ್ಪುರದಲ್ಲಿ ಆಘಾತಕಾರಿ ಘಟನೆ ನಡೆದಿದೆ. ಪತಿ ಹತ್ಯೆ ಆರೋಪದ ಮೇಲೆ 28 ವರ್ಷದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಮಹಿಳೆ, ಮೃತ ವ್ಯಕ್ತಿಯ ಐದನೇ ಪತ್ನಿ. ಕೆಲ ದಿನಗಳಿಂದ ಮಹಿಳೆ, ಪತಿಯಿಂದ ದೂರವಿದ್ದಳಂತೆ. ಅಚಾನಕ್ ಮನೆಗೆ ಬಂದ ಮಹಿಳೆ ಪತಿ ಜೊತೆ ಶಾರೀರಿಕ ಸಂಬಂಧ ಬೆಳೆಸಿದ್ದಾಳೆ. ನಂತ್ರ ಕತ್ತು ಕತ್ತರಿಸಿದ್ದಾಳೆ.
ಮಾರ್ಚ್ 8ರಂದು ಘಟನೆ ನಡೆದಿದೆ. ಏಕಾಂಗಿಯಾಗಿ ಫ್ಲಾಟ್ ನಲ್ಲಿ ವಾಸವಾಗಿದ್ದ ಪತಿ ಲಕ್ಷ್ಮಣ ಭೇಟಿಗೆ ಬಂದ ಪತ್ನಿ ಸ್ವಾತಿ, ಮೊದಲು ಪತಿಗೆ ಪೋರ್ನ್ ಚಿತ್ರವನ್ನು ತೋರಿಸಿದ್ದಾಳೆ. ನಂತ್ರ ಖುರ್ಚಿಗೆ ಆತನನ್ನು ಕಟ್ಟಿಹಾಕಿ ಶಾರೀರಿಕ ಸಂಬಂಧ ಬೆಳೆಸಿದ್ದಾಳೆ. ನಂತ್ರ ಚಾಕು ಸಹಾಯದಿಂದ ಲಕ್ಷ್ಮಣ್ ಕತ್ತು ಕತ್ತರಿಸಿದ್ದಾಳೆ. ಘಟನೆ ನಂತ್ರ ಸ್ಥಳದಿಂದ ಪರಾರಿಯಾಗಿದ್ದಾಳೆ.
ಮಾರ್ಚ್ 9ರಂದು ಲಕ್ಷ್ಮಣ್ ಹತ್ಯೆ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ವಿಚಾರಣೆ ನಡೆಸಿದಾಗ ಐದು ಪತ್ನಿಯರಿರುವ ವಿಷ್ಯ ಬಹಿರಂಗವಾಗಿದೆ. ಪ್ರತಿಯೊಬ್ಬರನ್ನೂ ಕರೆಸಿ ವಿಚಾರಣೆ ನಡೆಸಿದ್ದಾರೆ. ಐದನೇ ಪತ್ನಿ ಸ್ವಾತಿ, ಪದೇ ಪದೇ ಮಾತು ಬದಲಿಸಿದ್ದರಿಂದ ಅನುಮಾನಗೊಂಡ ಪೊಲೀಸರು ಸತ್ಯ ಹೊರಹಾಕುವಲ್ಲಿ ಯಶಸ್ವಿಯಾಗಿದ್ದಾರೆ.
ಸ್ವಾತಿಗೆ ಇಬ್ಬರು ಮಕ್ಕಳಿವೆ. ಎರಡನೇ ಮಗು ಅಕ್ರಮ ಸಂಬಂಧದಿಂದ ಹುಟ್ಟಿದೆ ಎಂದು ಪತಿ ಆರೋಪ ಮಾಡಿದ್ದನಂತೆ. ಆಸ್ತಿ ವಿಚಾರಕ್ಕೂ ಇಬ್ಬರ ಮಧ್ಯೆ ಗಲಾಟೆ ನಡೆಯುತ್ತಿತ್ತಂತೆ. ಇದ್ರಿಂದ ನೊಂದಿದ್ದ ಸ್ವಾತಿ, ಪತಿ ಹತ್ಯೆ ಮಾಡಿದ್ದಾಳೆ.