ಪ್ರಯಾಗರಾಜ್: 29 ವರ್ಷದ ಎಂಬಿಎ ಪದವೀಧರ ಪ್ರಯಾಗರಾಜ್ ನಲ್ಲಿ ಚಹಾ ಮಾರುತ್ತಿದ್ದಾನೆ. ಕಮಲೇಶ್ ಹೆಸರಿನ ಆತನ ಜೀವನಕ್ಕೆ ಇದೇ ಆಧಾರವಾಗಿದೆ.
ಕಮಲೇಶ ಜೀವನ ಏರು ಇಳಿತದಿಂದ ಕೂಡಿದೆ. ಲಖನೌ ಎಸ್.ಆರ್. ಕಾಲೇಜ್‌ನಿಂದ ಎಂಬಿಎ ಪದವಿ ಪಡೆದ ಅವರಿಗೆ ಹರಿಯಾಣದ ನೆಟ್ವರ್ಕಿಂಗ್ ಕಂಪನಿ ಒಂದರಲ್ಲಿ ವಾರ್ಷಿಕ 10 ಲಕ್ಷ ರೂ.ಪ್ಯಾಕೇಜ್ ವೇತನಕ್ಕೆ ಕರೆ ಬಂದಿತ್ತು. ಅಲ್ಲಿ ಕೆಲಸ ಮಾಡುತ್ತಿದ್ದರು.
ಆದರೆ, ಲಾಕ್ ಡೌನ್ ಸಮಯದಲ್ಲಿ ಕಂಪನಿ ಬಂದಾಯಿತು. ಇಂಥ ಸಂದರ್ಭದಲ್ಲಿ ಹಲವು ಯುವಕರು ಖಿನ್ನತೆಗೆ ಒಳಗಾಗುತ್ತಾರೆ. ಆದರೆ, ಕಮಲೇಶ್ ತನ್ನ ವೃತ್ತಿ ಕೌಶಲವನ್ನು ಬಳಸಿಕೊಂಡು ಚಹಾ ಮಾರಿ ತಮ್ಮ ಜೀವನ ನಡೆಸಲಾರಂಭಿಸಿದ್ದಾರೆ.
ಟಿಯಾಗೋದ ಸೀಮಿತ ಎಡಿಷನ್ ನ ಹೊಸ ಕಾರು ಲಾಂಚ್
“ಪ್ರಧಾನಿ ಅವರ ಆತ್ಮನಿರ್ಭರ ಭಾರತ ಯೋಜನೆಯಿಂದ ಪ್ರೇರಿತನಾಗಿದ್ದೇನೆ. ಯಾವುದೇ ಕೆಲಸವೂ ಕೀಳಲ್ಲ ಎಂದು ತಿಳಿಸಲು ಇಚ್ಛೆಪಡುತ್ತೇನೆ” ಎನ್ನುತ್ತಾರೆ ಸಿವಿಲ್ ಲೈನ್ಸ್ ರಸ್ತೆಯಲ್ಲಿ ಚಹಾ ಮಾರುವ ಕಮಲೇಶ್.