ಆರ್ಥಿಕ ಸಂಕಷ್ಟದಲ್ಲಿದ್ದ ದೆಹಲಿಯ ಸಣ್ಣದೊಂದು ಡಾಬಾದ ಮಾಲೀಕರ ನೋವನ್ನು ಆನ್ಲೈನ್‌ನಲ್ಲಿ ವೈರಲ್ ಮಾಡಿದ ಬಳಿಕ ದೇಶಾದ್ಯಂತ ನೆರವಿನ ಮಹಾಪೂರ ಹರಿದು ಬಂದ ಬಳಿಕ ಇದೀಗ ಆಗ್ರಾದ ಚಾಟ್ ಅಂಗಡಿ ಮಾಲೀಕರೊಬ್ಬರು ಸುದ್ದಿ ಮಾಡುತ್ತಿದ್ದಾರೆ.
ಜನಪ್ರಿಯ ಫುಡ್ ಬ್ಲಾಗರ್ Dhanishtha (@a_tastetour) ಇತ್ತೀಚೆಗೆ ವಿಡಿಯೋವೊಂದನ್ನು ಶೇರ್ ಮಾಡಿದ್ದು, ಉತ್ತರ ಪ್ರದೇಶದ ಆಗ್ರಾದ ಚಾಟ್ ಚಾಲಾ ಒಬ್ಬರು ಕಾಂಜಿ ವಡಾಗಳನ್ನು ಕಳೆದ 40 ವರ್ಷಗಳಿಂದ ಮಾರುತ್ತಿರುವುದು ತಿಳಿದು ಬಂದಿದೆ. ಕೊರೋನಾ ವೈರಸ್ ಲಾಕ್‌ಡೌನ್ ಕಾರಣದಿಂದ ಅವರ ವ್ಯವಹಾರ ಇತ್ತೀಚಿನ ದಿನಗಳಲ್ಲಿ ಮಂಕಾಗಿಬಿಟ್ಟಿದೆ. ಸಾಂಕ್ರಾಮಿಕ ಕಾರಣದಿಂದ ಈ ಹಿರಿಯ ಜೀವ ಪ್ರತಿನಿತ್ಯ 250-350 ರೂ.ಗಳನ್ನು ಮಾತ್ರವೇ ಸಂಪಾದಿಸಲು ಸಾಧ್ಯವಾಗುತ್ತಿದೆ.
ಈ ಪೋಸ್ಟ್‌ಗೆ ಅಭೂತಪೂರ್ವ ಪ್ರತಿಕ್ರಿಯೆ ಸಿಕ್ಕಿದ್ದು, ಸಾಕಷ್ಟು ಸಂಖ್ಯೆಯಲ್ಲಿ ಜನರು ಸಹಾಯ ಮಾಡಲು ಮುಂದಾಗಿದ್ದಾರೆ. ಧನಿಶ್ತಾ ಖುಲ್ಲರ್ ಹೆಸರಿನ ಮಹಿಳೆಯೊಬ್ಬರು ತಮ್ಮ ಟ್ವಿಟರ್ ಹ್ಯಾಂಡಲ್‌ನಲ್ಲಿ ತಮ್ಮ ಪೇಟಿಎಂ ಖಾತೆಯ ಸಂಖ್ಯೆ ಹಂಚಿಕೊಂಡಿದ್ದು, ಅಲ್ಲಿಗೆ ಬರುವ ಅಷ್ಟು ದುಡ್ಡನ್ನು ಚಾಟ್‌ವಾಲಾ ಚಾಚಾಗೆ ನೀಡುವುದಾಗಿ ಮಾತು ಕೊಟ್ಟಿದ್ದಾರೆ.
https://www.instagram.com/p/CGFfkQ5llGZ/?utm_source=ig_web_copy_link