ಮುಂಬೈ ವಿಮಾನ ನಿಲ್ದಾಣವೇ ಈತನ ಪಾಲಿಗೆ ಮನೆಯಾಗಿತ್ತು. ಅದೂ ಒಂದೆರಡು ದಿನವಲ್ಲ, ಬರೋಬ್ಬರಿ 74 ದಿನ ಈತ ಅಲ್ಲೇ ಬಂಧಿಯಾಗಿದ್ದ.
ಕೇರಳದ ಕ್ಲಬ್ ವೊಂದರ ಫುಟ್ ಬಾಲ್ ಪಂದ್ಯಾವಳಿಗಾಗಿ ಭಾರತಕ್ಕೆ ಬಂದಿದ್ದ ಘಾನ ದೇಶದ ಆಟಗಾರ ರಾಂಡಿ ಜಾನ್ ಮುಲ್ಲರ್, ಲಾಕ್ಡೌನ್ ಸಂದರ್ಭದಲ್ಲಿ ಮುಂಬೈ ವಿಮಾನ ನಿಲ್ದಾಣದಲ್ಲೇ ಸಿಲುಕಿದ್ದರು.
ಪಂದ್ಯ ಮುಗಿಸಿ ಕೀನ್ಯಾ ಏರ್ಲೈನ್ಸ್ ಮೂಲಕ ತನ್ಮ ದೇಶಕ್ಕೆ ಮರಳಲು ಕೇರಳದಿಂದ ಹೊರಟು ಮುಂಬೈ ತಲುಪುವಷ್ಟರಲ್ಲಿ ಲಾಕ್ಡೌನ್ ಘೋಷಣೆಯಾಗಿಬಿಟ್ಟಿತು. ಅಂದಿನಿಂದ ವಿಮಾನ ನಿಲ್ದಾಣವೇ ಮನೆ, ಆಪತ್ತಿಗಾದ ಅಲ್ಲಿನ ಸಿಬ್ಬಂದಿಯೇ ನೆಂಟರು ಎನ್ನುವಂತಾಗಿತ್ತು.
ಅಲ್ಲೇ ತಿಂದುಂಡು ಕಾಲ ಕಳೆದ ಮುಲ್ಲರ್, ಸದ್ಯಕ್ಕೆ ಏರ್ಪೋರ್ಟ್ ಸಿಬ್ಬಂದಿ ಹಾಗೂ ಯುವಸೇನಾ ಕಾರ್ಯಕರ್ತರ ನೆರವಿನಿಂದ ಹೋಟೆಲ್ ಗೆ ಸ್ಥಳಾಂತರಗೊಂಡಿದ್ದಾರೆ. ಇಷ್ಟು ದಿನ ವಿಮಾನ ನಿಲ್ದಾಣ ಸಿಬ್ಬಂದಿಯೇ ಈತನ ಕೆಲ ಖರ್ಚು ವೆಚ್ಚಗಳನ್ನೂ ನೋಡಿಕೊಂಡಿದ್ದಾರೆ.
23 ವರ್ಷದ ಈತ ಹಾಲಿವುಡ್ ನ ‘ದಿ ಟರ್ಮಿನಲ್’ ಚಿತ್ರದಲ್ಲಿ ಟಾಮ್ ಹಾಂಕ್ ಎಂಬ ಪಾತ್ರ ಕೂಡ ಮಾಡಿದ್ದ. ತನ್ನ ದೇಶಕ್ಕೆ ಮರಳಲು ಅನುಮತಿ ಸಿಗದೆ ಯುಎಸ್ ವಿಮಾನ ನಿಲ್ದಾಣದಲ್ಲೇ ಸಿಲುಕುವ ಕಥಾಹಂದರವುಳ್ಳ ಚಿತ್ರವದು. ಸದ್ಯಕ್ಕೀಗ ಅಂತಾರಾಷ್ಟ್ರೀಯ ವಿಮಾನಯಾನ ಸೇವೆ ಆರಂಭವಾಗುವುದನ್ನೇ ಎದುರು ನೋಡುತ್ತಿದ್ದಾನೆ.