ವಕೀಲರೊಬ್ಬರನ್ನು ಕಿಡ್ನ್ಯಾಪ್ ಮಾಡಿದ ದುಷ್ಕರ್ಮಿಗಳು ಬಳಿಕ ಅವರ ಮೇಲೆ ವಾಹನ ಹತ್ತಿಸಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಉತ್ತರಪ್ರದೇಶದ ಬಸ್ತಿಯಲ್ಲಿ ನಡೆದಿದೆ.
ಇಲ್ಲಿನ ಕಪ್ತಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನದೆದಿದೆ. ಬೈಡೋಲಿಯಾ ಅಜೈಬ್ ನಿವಾಸಿ ಚಂದ್ರಶೇಖರ್ ಯಾದವ್ (50) ಅಪಹರಣಕ್ಕೊಳಗಾಗಿ ಕೊಲೆಯಾಗಿರುವ ವಕೀಲರು.
ದ್ವಿಚಕ್ರವಾಹನದಲ್ಲಿ ಮನೆಗೆ ತೆರಳುತ್ತಿದ್ದ ವಲೀಕ ಚಂದ್ರಶೇಖರ್ ಅವರನ್ನು ಸ್ಕಾರ್ಪಿಯೋ ವಾಹನದಲ್ಲಿ ಬಂದ ದುಷ್ಕರ್ಮಿಗಳು ಅಡ್ಡಗಟ್ಟಿ ಅವರನ್ನು ಅಪಹರಿಸಿದ್ದರು. ಪೊಲೀಸರಿಗೆ ವಿಷಯ ತಿಳಿಯುವಷ್ಟರಲ್ಲಿ ಆರೋಪಿಗಳು ಅವರನ್ನು ವಾಲ್ಟರ್ ಗಂಜ್ ರಸ್ತೆಯಲ್ಲಿ ಅವರನ್ನು ಥಳಿಸಿ, ಅವರ ಮೇಲೆ ವಾಹನವನ್ನು ಹತ್ತಿಸಿಸಿ ಕೊಲೆಗೈದು ಪರಾರಿಯಾಗಿದ್ದಾರೆ.
ಪ್ರಕರಣ ಸಂಬಂಧ ಮೃತ ವಕೀಲರ ಸಂಬಂಧಿಯನ್ನು ಬಂಧಿಸಲಾಗಿದೆ. ವಕೀಲರ ಸಹೋದರಿ ಹಾಗೂ ಆಕೆಯ ಪತಿ ರಂಜಿತ್ ಯಾದವ್ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಆತನೇ ವಕೀಲರನ್ನು ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಇನ್ನಷ್ಟು ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.