ಅಂತರ್ ಜಾತಿ ವಿವಾಹಕ್ಕೆ ಸಂಬಂಧಿಸಿದಂತೆ ಬಾಂಬೆ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಪ್ರಕರಣವೊಂದರ ವಿಚಾರಣೆ ನಡೆಸಿದ ಕೋರ್ಟ್, ವಯಸ್ಕ ಹುಡುಗಿಯರು ತಮಗಿಷ್ಟವಾದವರನ್ನು ಮದುವೆಯಾಗಬಹುದು ಎಂದಿದೆ. ಕಲ್ಯಾಣ್ ನಲ್ಲಿ ವಾಸವಾಗಿರುವ ಜೋಡಿಯನ್ನು ಸುರಕ್ಷಿತವಾಗಿ ಮನೆಗೆ ಬಿಡುವಂತೆ ಕೋರ್ಟ್ ಸೂಚನೆ ನೀಡಿದೆ.
ತನ್ನ 19 ವರ್ಷದ ಮಗಳನ್ನು ವಾಪಸ್ ಕಳುಹಿಸುವಂತೆ ಯುವತಿ ತಂದೆ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಇದ್ರ ವಿಚಾರಣೆಯನ್ನು ಬಾಂಬ್ ಹೈಕೋರ್ಟ್ ನಡೆಸಿತ್ತು. ವಿಚಾರಣೆ ವೇಳೆ, ನಾನು ಪತಿ ಜೊತೆ ವಾಸವಾಗಲು ಇಚ್ಛಿಸಿದ್ದೇನೆಂದು ಯುವತಿ ಹೇಳಿದ್ದಳು. ಈ ಪ್ರಕರಣದ ತೀರ್ಪು ನೀಡಿದ ಕೋರ್ಟ್, ವಯಸ್ಕ ಹುಡುಗಿ ಇಚ್ಛಿಸಿದವನ್ನು ಮದುವೆಯಾಗಬಹುದು. ಇಚ್ಛಿಸಿದಲ್ಲಿ ಹೋಗಬಹುದು ಎಂದಿದ್ದಾರೆ.
ಸಮಾಜದಲ್ಲಿ ಏಕತೆಯನ್ನು ಸಾಧಿಸಲು ಅಂತರ್ಜಾತಿ ವಿವಾಹವನ್ನು ಪ್ರೋತ್ಸಾಹಿಸಬೇಕು. ದೇಶದಲ್ಲಿ 3000 ಜಾತಿ ಮತ್ತು ಧರ್ಮವಿದೆ. ಪ್ರತಿ 25 ಕಿಲೋಮೀಟರ್ ಗೆ ವಿವಿಧ ಧರ್ಮದ ಜನರು ವಾಸವಾಗಿದ್ದಾರೆ. ಈ ದೇಶದಲ್ಲಿ 130 ಕೋಟಿ ಜನರು ಒಟ್ಟಿಗೆ ವಾಸವಾಗಿದ್ದಾರೆ ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ.
ಡಿಸೆಂಬರ್ 6ರಂದು ಹುಡುಗಿ ತಂದೆ ದೂರು ನೀಡಿದ್ದರು. ಲಾಕ್ ಡೌನ್ ಸಂದರ್ಭದಲ್ಲಿ ಮನೆಯಲ್ಲಿದ್ದ ಮಗಳ ಒಪ್ಪಿಗೆ ಮೇರೆಗೆ ನಿಶ್ಚಿತಾರ್ಥ ನಡೆದಿತ್ತು. ಆದ್ರೆ ಡಿಸೆಂಬರ್ 6ರಂದು ಬೆಳಿಗ್ಗೆ ಮಗಳು ಮನೆಯಿಂದ ಹೋದವಳು ವಾಪಸ್ ಬಂದಿರಲಿಲ್ಲ. ಪೊಲೀಸರು 24 ಗಂಟೆ ಕಾಯುವಂತೆ ಹೇಳಿದ್ದರು. ಮರುದಿನ ಮಗಳು ಬೇರೆ ಧರ್ಮದ ಯುವಕನನ್ನು ಮೊದಲೇ ಮದುವೆಯಾಗಿದ್ದು, ಈಗ ಪತಿ ಮನೆಯಲ್ಲಿ ವಾಸವಾಗಿದ್ದಾಳೆ ಎಂದಿದ್ದರು. ಆ ನಂತ್ರ ತಂದೆ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು.