ಆನೆಯೇ ಸುಂದರ, ಇನ್ನು ಅದರಲ್ಲೂ ಮರಿ ಆನೆಯಾದರೆ..? ಅದರ ಪ್ರತಿ ಚಲನವಲನ ಇನ್ನೂ ಚೆಂದ ಎಂದು ಹೇಳುತ್ತಾರೆ. ಈಗ ಮರಿ ಆನೆಯೊಂದು ಸ್ನಾನ ಮಾಡುತ್ತಿರುವ ವಿಡಿಯೋ ಟ್ವಿಟ್ಟರ್ ನಲ್ಲಿ ಭರ್ಜರಿ ಸದ್ದು ಮಾಡುತ್ತಿದ್ದು, ಎಲ್ಲರನ್ನೂ ಫಿದಾ ಮಾಡಿದೆ.
ಭಾರತೀಯ ಅರಣ್ಯ ಇಲಾಖೆ ಅಧಿಕಾರಿ ಸುಶಾಂತ್ ನಂದಾ ಅವರು ಈ ವಿಡಿಯೋವನ್ನು ಟ್ವಿಟ್ಟರ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಆನೆಮರಿಯು ಮೊದಲು ತನ್ನ ಸೊಂಡಿಲಿನಲ್ಲಿ ನೀರು ಎಷ್ಟು ಅಳ ಇದೆ ಎಂಬುದನ್ನು ಪರೀಕ್ಷಿಸಿಕೊಂಡು, ಬಳಿಕ ನೀರಿನಲ್ಲಿಳಿದು ಮುಳುಗುವುದು, ಹಾರುವುದು ಮಾಡಿ ಸ್ನಾನವನ್ನು ಎಂಜಾಯ್ ಮಾಡಿದೆ ಎಂದು ಬರೆದುಕೊಂಡಿದ್ದಾರೆ.
ಇದಕ್ಕೆ ನೆಟ್ಟರಿಗರಿಂದ ಭರ್ಜರಿ ಪ್ರತಿಕ್ರಿಯೆಗಳು ಲಭ್ಯವಾಗಿದ್ದು, ಎಲ್ಲರೂ ಭಾರಿ ಪ್ರಮಾಣದಲ್ಲಿ ಹೊಗಳಿದ್ದಾರೆ. ಈ ವಿಡಿಯೋ ಈಗಾಗಲೇ 13.8k ವೀಕ್ಷಣೆ ಕಂಡಿದ್ದರೆ, 2.4k ಲೈಕ್ ಗಳು ಬಂದಿವೆ. 50 ಸೆಕೆಂಡ್ ವುಳ್ಳ ವಿಡಿಯೋ ಇದಾಗಿದೆ. ಇದು ಸಖತ್ ವೈರಲ್ ಆಗಿದೆ. ಇದೊಂದು ಸುಂದರ ದೃಶ್ಯ ಎಂದು ನೀಲಾ ಮಾದವ್ ಎಂಬ ಬಳಕೆದಾರರೊಬ್ಬರು ಹೇಳಿದ್ದು, ಇದಕ್ಕಾಗಿ ಆನೆಯನ್ನು ಬುದ್ಧಿವಂತ ಪ್ರಾಣಿ ಎನ್ನುತ್ತಾರೆಂದು ರವೀಂದ್ರ ಮಣಿ ಹೇಳುತ್ತಾರೆ.