alex Certify ಎನ್​ಸಿಪಿ ಮುಖ್ಯಸ್ಥ ಶರದ್​ ಪವಾರ್​ರನ್ನ ಭೇಟಿಯಾದ ಸೋನು ಸೂದ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎನ್​ಸಿಪಿ ಮುಖ್ಯಸ್ಥ ಶರದ್​ ಪವಾರ್​ರನ್ನ ಭೇಟಿಯಾದ ಸೋನು ಸೂದ್​

ಅಕ್ರಮ ಕಟ್ಟಡ ನಿರ್ಮಾಣ ಆರೋಪದಡಿಯಲ್ಲಿ ಬಾಲಿವುಡ್​ ನಟ ಸೋನು ಸೂದ್​ ಬಿಎಂಸಿ ವಿರುದ್ಧ ಮುಂಬೈ ಹೈಕೋರ್ಟ್ ಮೆಟ್ಟಿಲೇರಿರುವ ಬೆನ್ನಲ್ಲೇ ಇದೀಗ​ ಎನ್​ಸಿಪಿ ಮುಖ್ಯಸ್ಥ ಶರದ್​ ಪವಾರ್​ರನ್ನ ಅವರ ಮುಂಬೈನ ನಿವಾಸದಲ್ಲಿ ಭೇಟಿಯಾಗಿದ್ದಾರೆ. ಇವರಿಬ್ಬರ ಭೇಟಿಯ ಹಿಂದಿನ ಸ್ಪಷ್ಟ ಕಾರಣ ಇನ್ನೂ ಬಹಿರಂಗವಾಗಿಲ್ಲ.

ಅನುಮತಿಯಿಲ್ಲದೇ ಶಕ್ತಿ ಸಾಗರ್​ ವಸತಿ ಕಟ್ಟಡವನ್ನ ಹೋಟೆಲ್​ ಆಗಿ ಪರಿವರ್ತಿಸಿದ ಆರೋಪದ ಅಡಿಯಲ್ಲಿ ಸೋನು ಸೂದ್​ ವಿರುದ್ಧ ಎಫ್​ಐಆರ್​ ದಾಖಲಿಸಬೇಕೆಂದು ಕೋರಿ ಬಿಎಂಸಿ ದೂರು ಸಲ್ಲಿಸಿದೆ.

ಜುಹುದಲ್ಲಿ ಈಗಾಗಲೇ 2 ಬಾರಿ ತೆರವು ಕಾರ್ಯಾಚರಣೆ ನಡೆಸಿದ್ದರೂ ಸಹ ಸೋನು ಸೂದ್​ ಮತ್ತೆ ಅಕ್ರಮ ಕಟ್ಟಡ ನಿರ್ಮಾಣ ಕಾರ್ಯ ಮುಂದುವರಿಸಿದ್ದಾರೆ ಎಂದು ದೂರಿರುವ ಬಿಎಂಸಿ ಮುಂಬೈ ಹೈಕೋರ್ಟ್​ಗೆ ಅಫಿಢವಿಟ್​ ಸಲ್ಲಿಸಿದೆ.

ಕಳೆದ ವರ್ಷದ ಅಕ್ಟೋಬರ್​ನಲ್ಲಿ ಸೋನು ಸೂದ್​ ವಿರುದ್ಧ ಬಿಎಂಸಿ ನೋಟಿಸ್​ ನೀಡಿತ್ತು. ಈ ನೋಟಿಸ್​ ಪ್ರಶ್ನಿಸಿ ಸೋನು ಸಿವಿಲ್​ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರಾದರೂ ಡಿಸೆಂಬರ್​ನಲ್ಲಿ ಈ ಅರ್ಜಿ ವಜಾಗೊಂಡಿತ್ತು. ಇದನ್ನ ಪ್ರಶ್ನಿಸಿ ಸೋನು ಸೂದ್​ ಬಾಂಬೆ ಹೈಕೋರ್ಟ್​ ಮೆಟ್ಟಿಲೇರಿದ್ದರು. ಸೋನು ಸೂದ್​ರ ಈ ಅರ್ಜಿ ಸಂಬಂಧ ಮುಂಬೈ ಹೈಕೋರ್ಟ್ ಅಫಿಡವಿಟ್​ ಸಲ್ಲಿಸಿತ್ತು.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...
Získejte inspiraci a tipy pro vytváření chutných jídel doma, objevte nové lifestylové triky a naučte se pěstovat zdravé plodiny ve vaší zahradě. S našimi užitečnými články a nápady získáte dovednosti potřebné pro zlepšení kvality života a radost z vaší kuchyně a zahrady. Získejte nejlepší rady a triky od našich odborníků a staničte se mistrem ve vaření, životním stylu a zahradničení. Potraviny, které nejsou vhodné k konzumaci s kávou: Jak se zbavit Neuvěřitelný trik, o kterém vědí pouze ty nejlepší hospodyňky: proč Jak se zbavit čajových usazenin na šálcích Jak se zbavit zápachu z chladničky doma: 5 osvědčených Jak snížit Proč byste neměli házet knedlíky do vroucí vody: nečekaný důvod 5 způsobů, Jak se zbavit Jak efektivně odstranit staré usazeniny Brambory se Jak rychle vyčistit Tipy pro domácnost, kuchařství a zahradničení - články plné užitečných rad a triků, které vám pomohou v každodenním životě. Navštivte náš web pro jedinečné recepty, kreativní nápady a inspiraci pro úspěšnou zahradničení!