ದೆಹಲಿ ಬಳಿ ಪ್ರತಿಭಟನಾನಿರತರಾಗಿದ್ದ ರೈತರಿಗೆ ಪಿಜ್ಜಾ ವಿತರಿಸಿದ ವಿಚಾರವನ್ನು ಟೀಕಿಸಿದ ಮಂದಿಯ ವಿರುದ್ಧ ಹಾಸ್ಯ ನಟ ಗುರ್ಪ್ರೀತ್ ಘುಗ್ಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಕೇಂದ್ರ ಸರ್ಕಾರ ತಂದಿರುವ ಕೃಷಿ ಉತ್ತನ್ನ ಹಾಗೂ ಮಾರುಕಟ್ಟೆ ಸಂಬಂಧಿ ಹೊಸ ನೀತಿಗಳ ವಿರುದ್ಧ ದೆಹಲಿ-ಹರಿಯಾಣಾ ಗಡಿಯಲ್ಲಿರುವ ಸಿಂಘು ಬಳಿ ರೈತರು ಪ್ರತಿಭಟನೆ ಮಾಡುತ್ತಿದ್ದಾರೆ. ಈ ವೇಳೆ ಪಿಜ್ಜಾ ವಿತರಿಸಿದ ವಿಚಾರವನ್ನು, ’ಪಿಜ್ಜಾ ಲಂಗರ್’ ಎಂದು ಸಾಮಾಜಿಕ ಜಾಲತಾಣದಲ್ಲಿ ಒಂದಷ್ಟು ಮಂದಿ ಅಣಕ ಮಾಡಿದ್ದರು.
ಈ ಬಗ್ಗೆ ಪ್ರತಿಕ್ರಿಯಿಸಿದ ʼಸಿಂಗ್ ಈಸ್ ಕಿಂಗ್ʼ ನಟ, “ಪಿಜ್ಜಾ ತಯಾರಿಸಲು ಬೇಕಾದ ಸಾಮಗ್ರಿಗಳ ಬಗ್ಗೆ ಈ ಜನರು ಮೊದಲು ಯೋಚಿಸಲಿ. ಪಿಜ್ಜಾದ ಕ್ರಸ್ಟ್ ತಯಾರಿಸಲು ಗೋಧಿ ಹಿಟ್ಟು ಬೇಕು. ಅದರ ಮೇಲೆ ಹಾಕುವ ಚೀಸ್‌ಗೆ ಗೋವಿನ ಹಾಲು ಬೇಕು. ಇವೆಲ್ಲಾ ರೈತರಿಂದಲೇ ಅಲ್ಲವೇ ಬರುವುದು?” ಎಂದು ಪ್ರಶ್ನಿಸಿದ್ದಾರೆ.
“ಇಷ್ಟಕ್ಕೂ ರೈತರು ಪಿಜ್ಜಾ ತಿಂದರೆ ತಪ್ಪೇನು” ಎಂದು ಘುಗ್ಗಿ ಟೀಕಾಕಾರರಿಗೆ ಪ್ರಶ್ನಿಸಿದ್ದಾರೆ.