ಆಗಿಂದಾಗೆ ವಿವಿಧ ಮಹಾನಗರಗಳ ಪೊಲೀಸರು ಟ್ವಿಟರ್ ನಿಂದ ಜನರ ಗಮನ ಸೆಳೆಯುತ್ತಿರುತ್ತಾರೆ. ಅರ್ಥಗರ್ಭಿತ ಸಂದೇಶಗಳು, ಕೆಲವೊಮ್ಮೆ ಹಾಸ್ಯಗಳು ಅವರ ಖಾತೆಯಿಂದ ಪ್ರಕಟಗೊಳ್ಳುತ್ತವೆ. ಇದೀಗ ಪುಣೆ ಪೊಲೀಸರ ಮಾನವೀಯತೆ ಸಂದೇಶ ಗಮನ ಸೆಳೆಯುವಂತೆ ಮಾಡಿದೆ.
ಒಬ್ಬ ವ್ಯಕ್ತಿಯು ವಯಸ್ಸಾದ ವ್ಯಕ್ತಿಯನ್ನು ರಸ್ತೆ ದಾಟಲು ಸಹಾಯ ಮಾಡುತ್ತಿದ್ದ ಫೋಟೋದೊಂದಿಗೆ ಮಾನವೀಯ ಸಂದೇಶವನ್ನು ಪುಣೆ ಪೊಲೀಸರು ನೀಡಿದ್ದಾರೆ.
ಮಕ್ಕಳನ್ನು ಶಾಲೆಗೆ ಸೇರಿಸುವ ಪೋಷಕರಿಗೆ ಮತ್ತೊಂದು ಶಾಕ್: ಕೊರೋನಾ ಸಂಕಷ್ಟದ ಹೊತ್ತಲ್ಲೇ ಶುಲ್ಕ ಹೆಚ್ಚಳದ ಬರೆ…?
ಪುಣೆ ನಗರದಲ್ಲಿ ನೋಡಿದ ಮತ್ತು ಕಾಣದ ಕ್ಷಣಗಳು, ನಾವು ಪರಸ್ಪರ ಕಾಳಜಿ ವಹಿಸಲು ಪ್ರಯತ್ನಿಸುತ್ತಿದ್ದೇವೆ ಎಂಬ ಪೊಲೀಸರ ಒಕ್ಕಣೆ ಈ ಕೊರೊನಾ ಸಂದರ್ಭದಲ್ಲಿ ನೆಟ್ಟಿಗರ ಮನ ತಟ್ಟಿದೆ.
ಈ ಟ್ವೀಟ್ ಒಂದು ರೀತಿಯ ಪ್ರೀತಿ, ಕಾಳಜಿ ಸಂಕೇತವಾಗಿದೆ ಎಂದು ನೆಟ್ಟಿಗರು ಅಭಿಪ್ರಾಯಗಳನ್ನು ನೀಡಿದ್ದಾರೆ.