alex Certify BIG NEWS: ಬಿಹಾರ ಸರ್ಕಾರ ಉರುಳಿಸಲು ಮುಂದಾದ್ರಾ ಲಾಲು…? ಶಾಸಕರಿಗೆ ಆಮಿಷವೊಡ್ಡಿದ ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಬಿಹಾರ ಸರ್ಕಾರ ಉರುಳಿಸಲು ಮುಂದಾದ್ರಾ ಲಾಲು…? ಶಾಸಕರಿಗೆ ಆಮಿಷವೊಡ್ಡಿದ ವಿಡಿಯೋ ವೈರಲ್

ವಿಧಾನಸಭಾ ಸ್ಪೀಕರ್​ ಆಯ್ಕೆ ಪ್ರಕ್ರಿಯೆ ನಡೆಯುವ ಕೆಲವೇ ಗಂಟೆಗಳ ಮೊದಲು ಬಿಹಾರ ರಾಜ್ಯ ರಾಜಕೀಯದಲ್ಲಿ ಹೈಡ್ರಾಮಾ ಶುರುವಾಗಿದೆ. ಆರ್.ಜೆ.ಡಿ. ಮುಖ್ಯಸ್ಥ ಲಾಲು ಪ್ರಸಾದ್​ ಯಾದವ್​ ವಿರುದ್ಧ ಎನ್​ಡಿಎ ಶಾಸಕರಿಗೆ ಆಮಿಷವೊಡ್ಡುತ್ತಿರುವ ಆರೋಪ ಎದುರಾಗಿದೆ.

ನಿತೀಶ್​ ಕುಮಾರ್​ ನೇತೃತ್ವದ ಎನ್​ಡಿಎ ಸರ್ಕಾರ ಉರುಳಿಸಲು ಲಾಲು ಪ್ರಸಾದ್​ ಯಾದವ್​ ಪ್ಲಾನ್​ ಮಾಡ್ತಿದ್ದಾರೆ ಅಂತಾ ಬಿಜೆಪಿ ಮುಖಂಡ ಸುಶೀಲ್​ ಮೋದಿ ಆರೋಪ ಮಾಡಿದ್ದರು.

ಇದಾದ ಒಂದೇ ದಿನದಲ್ಲಿ ಶಾಸಕ ಲಲ್ಲನ್​ ಪಾಸ್ವಾನ್​ಗೆ ಲಾಲೂ ಆಮಿಷವೊಡ್ಡುತ್ತಿರುವ ಆಡಿಯೋವೊಂದು ವೈರಲ್​ ಆಗಿದೆ. ಇದರಲ್ಲಿ ಲಾಲೂ ಸ್ಪೀಕರ್​ ಚುನಾವಣೆ ವೇಳೆ ಆರ್​ಜೆಡಿ ಪರ ಕೆಲಸ ಮಾಡಿದರೆ ಆರ್​ಜೆಡಿ ಅಧಿಕಾರಕ್ಕೆ ಬಂದ ಸಮಯದಲ್ಲಿ ಮಂತ್ರಿ ಸ್ಥಾನ ಕೊಡುತ್ತೇವೆ ಎಂದು ಆಮಿಷವೊಡ್ಡಿದ್ದಾರೆ.

ಆಡಿಯೋದಲ್ಲಿ ಲಾಲೂ ಪಿಎ ಶಾಸಕರಿಗೆ ಕರೆ ಮಾಡುತ್ತಾರೆ. ಕರೆಯನ್ನ ಶಾಸಕರ ಪಿಎ ಸ್ವೀಕರಿಸುತ್ತಾರೆ. ನಂತರ ಲಾಲೂ ಪಿಎ ಲಾಲೂ ಪ್ರಸಾದ್​ ಯಾದವ್​ ಶಾಸಕರೊಂದಿಗೆ ಮಾತನಾಡಲು ಬಯಸುತ್ತಾರೆ ಎಂದು ಹೇಳಿದ್ದಾರೆ. ಕೂಡಲೇ ಶಾಸಕರು ಕರೆ ಸ್ವೀಕರಿಸುತ್ತಾರೆ. ಆಗ ಲಾಲೂ ಶಾಸಕರನ್ನ ಅಭಿನಂದಿಸಿ ಬಳಿಕ ಮತದಾನದ ಸಂದರ್ಭದಲ್ಲಿ ವಿಧಾನಸಭೆಯಿಂದ ದೂರವಿರುವಂತೆ ಹೇಳುತ್ತಾರೆ. ಇದಕ್ಕೆ ಶಾಸಕ ಇದು ಕಷ್ಟದ ಕೆಲಸ ಎನ್ನುತ್ತಾರೆ. ಬಳಿಕ ಮಾತನಾಡಿದ ಲಾಲೂ ಎನ್​ಡಿಎ ಸರ್ಕಾರ ಶೀಘ್ರದಲ್ಲೇ ಕುಸಿಯಲಿದೆ. ಆರ್​ಜೆಡಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ನಿಮಗೆ ಮಂತ್ರಿ ಸ್ಥಾನ ನೀಡಲಾಗುವುದು ಅಂತಾ ಆಮಿಷವೊಡ್ಡಿದ್ದಾರೆ ಎನ್ನಲಾದ ಆಡಿಯೋ ಇದಾಗಿದೆ.

ಆದರೆ ಈ ಆರೋಪ ನಿರಾಕರಿಸಿರುವ ಆರ್​ಜೆಡಿ, ಇದು ನಕಲಿ ಆಡಿಯೋ. ಬಿಜೆಪಿ ಷಡ್ಯಂತ್ರದಿಂದ ಈ ಆಡಿಯೋ ರಚಿಸಿ ಆರ್​ಜೆಡಿಗೆ ಧಕ್ಕೆ ತರಲು ಯತ್ನಿಸಿದೆ ಅಂತಾ ಆರೋಪಿಸಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...
Získejte inspiraci a tipy pro vytváření chutných jídel doma, objevte nové lifestylové triky a naučte se pěstovat zdravé plodiny ve vaší zahradě. S našimi užitečnými články a nápady získáte dovednosti potřebné pro zlepšení kvality života a radost z vaší kuchyně a zahrady. Získejte nejlepší rady a triky od našich odborníků a staničte se mistrem ve vaření, životním stylu a zahradničení. Potraviny, které nejsou vhodné k konzumaci s kávou: Jak se zbavit Neuvěřitelný trik, o kterém vědí pouze ty nejlepší hospodyňky: proč Jak se zbavit čajových usazenin na šálcích Jak se zbavit zápachu z chladničky doma: 5 osvědčených Jak snížit Proč byste neměli házet knedlíky do vroucí vody: nečekaný důvod 5 způsobů, Jak se zbavit Jak efektivně odstranit staré usazeniny Brambory se Jak rychle vyčistit Tipy pro domácnost, kuchařství a zahradničení - články plné užitečných rad a triků, které vám pomohou v každodenním životě. Navštivte náš web pro jedinečné recepty, kreativní nápady a inspiraci pro úspěšnou zahradničení!