
ವಯಸ್ಸು ಕೇವಲ ಸಂಖ್ಯೆ ಎಂಬ ಮಾತಿಗೆ ಅನ್ವರ್ಥವಾಗುವ ರೀತಿಯಲ್ಲಿ ಅನೇಕರು ಜೀವಿಸುತ್ತಿರುವ ಸಾಕಷ್ಟು ನಿದರ್ಶನಗಳನ್ನು ಸಾಮಾಜಿಕ ಜಾಲತಾಣದಲ್ಲಿ ನೋಡುತ್ತಲೇ ಬಂದಿದ್ದೇವೆ.
ಆಶಾ ಅಂಬಾಡೆ ಹೆಸರಿನ 68 ವರ್ಷದ ಹಿರಿಯ ನಾಗರಿಕರೊಬ್ಬರು ಮಹಾರಾಷ್ಟ್ರದ ನಾಶಿಕ್ ಬಳಿ ಇರುವ ಹರಿಹರ ಕೋಟೆಯ ಕಡಿದಾದ ಮೆಟ್ಟಿಲುಗಳನ್ನು ಏರುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸೆನ್ಸೇಷನ್ ಆಗಿದ್ದಾರೆ. ಆಶಾರ ಈ ಸಾಧನೆಯನ್ನು ಕೋಟೆಯ ಬಾಗಿಲ ಬಳಿ ಇದ್ದ ಉತ್ಸಾಹಿಗಳು ತಂತಮ್ಮ ಫೋನ್‌ಗಳಲ್ಲಿ ವಿಡಿಯೋ ರೆಕಾರ್ಡಿಂಗ್ ಮಾಡಿಕೊಂಡಿದ್ದಾರೆ.
ಆಶಾರ ಈ ಸಾಧನೆಯ ವಿಡಿಯೋವನ್ನು ಟ್ವಿಟರ್‌ನಲ್ಲಿ ಶೇರ್ ಮಾಡಿಕೊಂಡ ಅನೇಕರ ಪೈಕಿ ಭಾರತೀಯ ಅರಣ್ಯ ಸೇವೆ ಅಧಿಕಾರಿ ಸುಧಾ ರಾಮೆನ್ ಸಹ ಒಬ್ಬರಾಗಿದ್ದಾರೆ.
https://www.instagram.com/p/CGH-T3Xh9NP/?utm_source=ig_web_copy_link