ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯಲು ಆಗ್ರಹಿಸಿ ದಿಲ್ಲಿಯ ಗಡಿಗಳಲ್ಲಿ ರೈತರು ಕಳೆದ ನವೆಂಬರ್ ತಿಂಗಳಿನಿಂದ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ.
ಇದೀಗ ಈ ಪ್ರತಿಭಟನೆಯು ಟ್ರ್ಯಾಕ್ಟರ್ ರ್ಯಾಲಿ ಸ್ವರೂಪ ಪಡೆದಿದ್ದು, ಪಂಜಾಬ್, ಹರಿಯಾಣ ಮುಂತಾದ ಭಾಗಗಳಿಂದ ಜ.26 ರ ಗಣರಾಜ್ಯೋತ್ಸವದಂದು ದಿಲ್ಲಿಗೆ ನೂರಾರು ಟ್ರ್ಯಾಕ್ಟರ್ ಗಳು ದಾಂಗುಡಿ ಇಟ್ಟಿವೆ.
ವಿಶೇಷವೆಂದರೆ ರೈತನೊಬ್ಬ ಪಂಜಾಬ್ ನಿಂದ ದಿಲ್ಲಿಗೆ ಹಿಮ್ಮುಖವಾಗಿ (ರಿವರ್ಸ್ ಗೇರ್) ಟ್ರ್ಯಾಕ್ಟರ್ ಚಾಲನೆ ಮಾಡಿಕೊಂಡು ಬರುವ ಮೂಲಕ ಎಲ್ಲರ ಗಮನ ಸೆಳೆದಿದ್ದಾನೆ.
ದೆಹಲಿಯಲ್ಲಿ ಇದೇ ಮೊದಲ ಬಾರಿಗೆ ಗಣರಾಜ್ಯೋತ್ಸವದಂದು ಬೃಹತ್ ಪ್ರತಿಭಟನೆ: ರೈತರ ರಣಕಹಳೆ -ಟ್ರ್ಯಾಕ್ಟರ್ ರ್ಯಾಲಿ
ಹೆದ್ದಾರಿಯಲ್ಲಿ ರಿವರ್ಸ್ ಗೇರ್ ನಲ್ಲಿ ಬರುತ್ತಿದ್ದ ಟ್ರ್ಯಾಕ್ಟರ್ ಕಂಡ ಜನರು ವಿಡಿಯೋ ಮಾಡಿಕೊಂಡಿದ್ದು, ಆವೋ ವೀರೇ, ಆವೋ ವೀರೇ ಎಂದು ಹುರಿದುಂಬಿಸಿದ್ದಾರೆ.
ಕೃಷಿ ಕಾಯ್ದೆಗಳನ್ನೂ ಇದೇ ರೀತಿ ಹಿಂಪಡೆಯಿರಿ ಎಂಬ ಸಂದೇಶ ನೀಡುವ ಸಲುವಾಗಿಯೇ ಹಿಮ್ಮುಖ ಚಲನೆ ಮಾಡಿದ್ದಾಗಿ ರೈತರು ಹೇಳಿದ್ದಾರೆ. ವಿಡಿಯೋವೀಗ ಟ್ವಿಟ್ಟರ್ ನಲ್ಲಿ ವೈರಲ್ ಆಗಿದ್ದು, 6800 ಕ್ಕೂ ಅಧಿಕ ಮಂದಿ ಮೆಚ್ಚಿಕೊಂಡಿದ್ದಾರೆ.
https://twitter.com/Tractor2twitr/status/1353170680620212225?ref_src=twsrc%5Etfw%7Ctwcamp%5Etweetembed%7Ctwterm%5E1353170680620212225%7Ctwgr%5E&ref_url=https%3A%2F%2Fwww.timesnownews.com%2Fthe-buzz%2Farticle%2Faajao-veere-farmer-reaches-delhi-driving-tractor-in-reverse-gear-ahead-of-republic-day-rally-watch%2F711387