ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನ ದಿನಕ್ಕೂ ಹೆಚ್ಚಾಗ್ತಿದೆ. ಈ ಮಧ್ಯೆ ಮಹಾರಾಷ್ಟ್ರ ಸರ್ಕಾರ ಕೊರೊನಾ ಔಷಧಿ ನೀಡಲು ಆಧಾರ್ ಅನಿವಾರ್ಯ ಮಾಡಿದೆ. ಕೊರೊನಾ ಪಾಸಿಟಿವ್ ವರದಿ ಜೊತೆ ಆಧಾರ್ ಕಾರ್ಡ್ ತರುವುದು ಕಡ್ಡಾಯವೆಂದು ಸುತ್ತೋಲೆ ಹೊರಡಿಸಲಾಗಿದೆ.
ಸರ್ಕಾರದ ಅನುಮೋದನೆ ನಂತ್ರವೇ remdesivir ಮತ್ತು tocilizumab ಔಷಧಿಯನ್ನು ಬಿಎಂಸಿ ಆಸ್ಪತ್ರೆಗಳಲ್ಲಿ ಬಳಸಲಾಗುತ್ತದೆ. ಔಷಧಿಗಳ ಕೊರತೆ ಹಾಗೂ ಕಾಳಸಂತೆಯಲ್ಲಿ ಮಾರಾಟ ತಪ್ಪಿಸಲು ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ. ಆಧಾರ್ ಲಿಂಕ್ ಆದಲ್ಲಿ ಬೇಗ ಮಾಹಿತಿ ಲಭ್ಯವಾಗುತ್ತದೆ. ಅನೇಕರು ಈ ಬಗ್ಗೆ ದೂರು ನೀಡಿದ್ದರು ಎನ್ನಲಾಗಿದೆ.
ಆಸ್ಪತ್ರೆಯಲ್ಲಿ ಔಷಧಿ ಬಳಸುವ ಮುನ್ನ ಮುಖ್ಯ ವೈದ್ಯರ ಅನುಮತಿ ಪಡೆಯಬೇಕು. ಜೊತೆಗೆ ಈ ಬಗ್ಗೆ ದಾಖಲೆ ಬರೆದಿಡಬೇಕು. ಔಷಧಿ ಮಳಿಗೆಗಳಲ್ಲಿ ಕೂಡ ಆಧಾರ್ ಕಾರ್ಡ್ ಅನಿವಾರ್ಯ. ಈ ಔಷಧಿ ಪಡೆಯುವವರು ಆಧಾರ್ ತೋರಿಸಬೇಕಾಗುತ್ತದೆ.