ಸರ್ಕಾರಿ ಹಾಗೂ ಸರ್ಕಾರೇತರ ಕೆಲಸಗಳಿಗೆ ಆಧಾರ್ ಅನಿವಾರ್ಯವಾಗಿದೆ. ಈಗ ಸಾರಿಗೆ ಸಚಿವಾಲಯ ಮತ್ತಷ್ಟು ಸೇವೆಗಳಿಗೆ ಆಧಾರ್ ಕಡ್ಡಾಯ ಮಾಡಲು ಹೊರಟಿದೆ. ಇನ್ನೂ ಆಧಾರ್ ಕಾರ್ಡ್ ಪಡೆದಿಲ್ಲವೆಂದಾದ್ರೆ ವಿಳಂಬ ಮಾಡದೆ ಆಧಾರ್ ಗೆ ಅರ್ಜಿ ಸಲ್ಲಿಸಿ.
ಸಾರಿಗೆ ಇಲಾಖೆ ಆನ್ಲೈನ್ ಸೌಲಭ್ಯಗಳಿಗೆ ಆಧಾರ್ ಅನಿವಾರ್ಯ ಮಾಡ್ತಿದೆ. ಸಾರಿಗೆ ಇಲಾಖೆಯ ಯಾವುದೇ ಆನ್ಲೈನ್ ಸೌಲಭ್ಯವನ್ನು ನೀವು ಪಡೆಯಬೇಕಾದ್ರೆ ಕಡ್ಡಾಯವಾಗಿ ಆಧಾರ್ ಹೊಂದಿರಬೇಕು.
ಕಲಿಕಾ ಪರವಾನಗಿ, ಚಾಲನಾ ಪರವಾನಗಿ ನವೀಕರಣ, ವಿಳಾಸ ಬದಲಾವಣೆ, ಆರ್‌ಸಿ, ಅಂತರರಾಷ್ಟ್ರೀಯ ಚಾಲನಾ ಪರವಾನಗಿ, ವರ್ಗಾವಣೆಯ ಸೂಚನೆ ಸೇರಿದಂತೆ 16 ಬಗೆಯ ಆನ್‌ಲೈನ್ ಸೇವೆಗಳಿಗೆ ಸಾರಿಗೆ ಸಚಿವಾಲಯ ಆಧಾರ್ ಪರಿಶೀಲನೆಯನ್ನು ಕಡ್ಡಾಯಗೊಳಿಸಲಿದೆ. ವಾಹನದ ಮಾಲೀಕತ್ವದ ಬದಲಾವಣೆಯನ್ನೂ ಇದರಲ್ಲಿ ಸೇರಿಸಲಾಗಿದೆ.
ಇನ್ನೂ ನಿಮ್ಮ ಬಳಿ ಆಧಾರ್ ಕಾರ್ಡ್ ಇಲ್ಲವೆಂದಾದ್ರೆ ಈಗ್ಲೇ ಆಧಾರ್ ಕಾರ್ಡ್ ಗೆ ಅರ್ಜಿ ಸಲ್ಲಿಸಿ. ಅಂಚೆ ಕಚೇರಿಯಲ್ಲೂ ಆಧಾರ್ ಮಾಡಿಕೊಡಲಾಗ್ತಿದೆ. ಆಧಾರ್ ಕಾರ್ಡ್ ಗೆ ಅರ್ಜಿ ಸಲ್ಲಿಸಿದ ನಂತ್ರ ನೋಂದಣಿ ಸ್ಲಿಪ್ ಸಿಗುತ್ತದೆ. ಅದನ್ನು ತೋರಿಸಿ ನೀವು ಲಾಭ ಪಡೆಯಬಹುದು.