alex Certify ಕೇವಲ ಒಂದು ಕರೆ….! ನಿಮ್ಮ ಯಾವುದೇ ʼಆಧಾರ್ʼ ಸಮಸ್ಯೆಗೆ ಹೇಳಿ ಗುಡ್ ಬೈ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೇವಲ ಒಂದು ಕರೆ….! ನಿಮ್ಮ ಯಾವುದೇ ʼಆಧಾರ್ʼ ಸಮಸ್ಯೆಗೆ ಹೇಳಿ ಗುಡ್ ಬೈ

ಸದ್ಯ ಆಧಾರ್ ಕಾರ್ಡ್ ಒಂದು ಪ್ರಮುಖ ದಾಖಲೆಯಾಗಿದೆ. ಆಧಾರ್ ಕಾರ್ಡ್ ನಲ್ಲಿ ಮಾಹಿತಿ ನವೀಕರಿಸುವುದು ಇನ್ಮುಂದೆ ಮತ್ತಷ್ಟು ಸುಲಭವಾಗಿದೆ. ಆಧಾರ್ ಗೆ ಸಂಬಂಧಿಸಿದ ಪ್ರತಿಯೊಂದು ಸಮಸ್ಯೆ ಬಗೆಹರಿಸಲು ಯುಡಿಎಐ  ಸಹಾಯವಾಣಿ ಪ್ರಾರಂಭಿಸಿದೆ. ಸಹಾಯವಾಣಿ ಸಂಖ್ಯೆ 1947.

ಇದು 12 ಭಾಷೆಗಳಲ್ಲಿ ಲಭ್ಯವಿದೆ. ಹಿಂದಿ, ಇಂಗ್ಲಿಷ್, ತೆಲುಗು, ಕನ್ನಡ, ತಮಿಳು, ಮಲಯಾಳಂ, ಪಂಜಾಬಿ, ಗುಜರಾತಿ, ಮರಾಠಿ, ಒರಿಯಾ, ಬಂಗಾಳಿ, ಅಸ್ಸಾಮೀಸ್ ಮತ್ತು ಉರ್ದು ಭಾಷೆಗಳಲ್ಲಿ ಲಭ್ಯವಿದೆ ಎಂದು ಯುಐಡಿಎಐ ಟ್ವೀಟ್ ಮಾಡಿದೆ. ಆಧಾರ್‌ಗೆ ಸಂಬಂಧಿಸಿದ ಪ್ರತಿಯೊಂದು ಸಮಸ್ಯೆಗೆ ಇಲ್ಲಿ ಪರಿಹಾರ ಸಿಗಲಿದೆ.

ಡೆಬಿಟ್-ಕ್ರೆಡಿಟ್ ಕಾರ್ಡ್ ನಂತೆ ಕಾಣುವ ಹೊಸ ಆಧಾರ್ ಕಾರ್ಡ್ ದುಬಾರಿಯಲ್ಲ. ಜನಸಾಮಾನ್ಯರ ದೃಷ್ಟಿಯಿಂದ ಯುಐಡಿಎಐ ಇದ್ರ ಶುಲ್ಕವನ್ನು 50 ರೂಪಾಯಿಗೆ ನಿಗದಿಪಡಿಸಿದೆ. ಉಳಿದ ಆಧಾರ್ ಗಿಂತ ಪಿವಿಸಿ ಬೇಸ್ ಆಧಾರ್ ಹೆಚ್ಚು ಸುರಕ್ಷಿತವಾಗಿದೆ. ಪಿವಿಸಿ ಆಧಾರ್ ಕಾರ್ಡ್ ಬಹಳ ಕಾಲ ಉಳಿಯುತ್ತದೆ. ಇದು ಆಕರ್ಷಕವಾಗಿದೆ.

ಮೊದಲು https://resident.uidai.gov.in/ ಗೆ ಹೋಗಬೇಕು. ಅಲ್ಲಿ My Aadhaar Section ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ಗೆಟ್ ಆಧಾರ್ ವಿಭಾಗದಲ್ಲಿ Order Aadhar PVC Card ಕ್ಲಿಕ್ ಮಾಡಬೇಕು. ಅಲ್ಲಿ ಆಧಾರ್ ಸಂಖ್ಯೆ ಅಥವಾ ವರ್ಚುವಲ್ ಐಡಿ ಹಾಕಬೇಕು. ನಂತ್ರ ಸೆಕ್ಯೂರಿಟಿ ಬಾಕ್ಸ್ ಗೆ ಹೋಗಿ ಒಟಿಪಿಗೆ ಮನವಿ ಸಲ್ಲಿಸಬೇಕು. ಮೊಬೈಲ್ ಗೆ ಒಟಿಪಿ ಬರುತ್ತದೆ. ಅಲ್ಲಿ ಒಟಿಪಿ ಹಾಕಬೇಕು. ನಂತ್ರ ಪೇಮೆಂಟ್ ಆಯ್ಕೆಗೆ ಹೋಗಿ 50 ರೂಪಾಯಿ ಶುಲ್ಕ ಪಾವತಿ ಮಾಡಬೇಕು. ನಂತ್ರ ನಿಮ್ಮ ನೋಂದಾಯಿತ ನಂಬರ್ ಗೆ ಮಾಹಿತಿ ಬರಲಿದೆ. ಕೆಲ ದಿನಗಳ ನಂತ್ರ ನೀವು ನೀಡಿದ ವಿಳಾಸಕ್ಕೆ ಆಧಾರ್ ಕಾರ್ಡ್ ಬರಲಿದೆ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...