alex Certify ಆನೆಮರಿಗಳ ಚಿನ್ನಾಟದ ಮತ್ತೊಂದು ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆನೆಮರಿಗಳ ಚಿನ್ನಾಟದ ಮತ್ತೊಂದು ವಿಡಿಯೋ ವೈರಲ್

ಕಳೆದ 2-3 ವಾರಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಆನೆಮರಿಗಳು ಬಹಳ ಸದ್ದು ಮಾಡುತ್ತಿವೆ. ಇದೀಗ ಗಜಪಡೆಯ ಮತ್ತೊಂದು ವಿಡಿಯೋವನ್ನು ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು ಶೇರ್‌ ಮಾಡಿಕೊಂಡಿದ್ದಾರೆ.

ತಮಿಳುನಾಡಿನ ಮುದುಮಲೈ ಅರಣ್ಯ ಪ್ರದೇಶದಲ್ಲಿ ಆನೆಮರಿಗಳು ತಮ್ಮ ಅಮ್ಮಂದಿರ ಪಕ್ಕ ಚಲಿಸುತ್ತಾ, ಹಿಂಡಿನಲ್ಲಿ ಇರುವ ಈ ವಿಡಿಯೋ ನೆಟ್ಟಿಗರಿಗೆ ಬಲೇ ಇಷ್ಟವಾಗಿದೆ. ಮರಿಗಳು ತಮ್ಮ ತಮ್ಮಲ್ಲೇ ಚಿನ್ನಾಟದಲ್ಲಿ ತೊಡಗಿರುವ ವೇಳೆ ಅವುಗಳ ಅಮ್ಮಂದಿರು ಅವುಗಳ ರಕ್ಷಣೆಗೆ ಕಟ್ಟೆಚ್ಚರ ವಹಿಸಿರುವುದನ್ನು ಕಾಣಬಹುದಾಗಿದೆ.

ತಾಯ್ತನ ಎನ್ನುವುದು ಪ್ರಕೃತಿಯ ಅತ್ಯಂತ ಸುಂದರವಾದ ರಚನಾತ್ಮಕ ಕೊಡುಗೆ ಎಂಬುದನ್ನು ಸಾಕಷ್ಟು ಬಾರಿ ಕೇಳಿದ್ದೇವೆ. ಈ ವಿಡಿಯೋ, ಇದೇ ಪದಗಳ ಸಾಕಾರ ರೂಪದಂತೆ ಕಾಣುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...