ಸಾಕು ಪ್ರಾಣಿಗಳು ಏನು ಮಾಡಿದ್ರೂ ಒಂಥರಾ ಕ್ಯುಟ್ ಆಗಿ ಕಾಣುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಮುದ್ದು ಪ್ರಾಣಿಗಳ ಸಾಕಷ್ಟು ವಿಡಿಯೋಗಳು ವೈರಲ್ ಆಗಿ ಹರಿದಾಡುವುದನ್ನುಸಾಕಷ್ಟು ನೋಡಿದ್ದೇವೆ.
ಬೀದಿಯಲ್ಲಿ ಕ್ರಿಕೆಟ್ ಆಡುತ್ತಿರುವ ವ್ಯಕ್ತಿಯೊಬ್ಬರು, ಆಟವಾಡಲು ಮನುಷ್ಯರ ಬದಲು ಮುದ್ದಿನ ನಾಯಿಯನ್ನು ಜೊತೆಗೆ ಸೇರಿಸಿಕೊಂಡಿರುವ ವಿಡಿಯೋವೊಂದು ವೈರಲ್ ಆಗಿದೆ. ಕೆಂಪು ಬಟ್ಟೆಯಲ್ಲಿ ಮಿಂಚುತ್ತಿರುವ ಮೂರು ನಾಯಿಗಳು ದೆಹಲಿಯ ಗಲ್ಲಿಯೊಂದರಲ್ಲಿ ಕ್ರಿಕೆಟ್ ಆಡುತ್ತಿರುವುದನ್ನು ಈ ವಿಡಿಯೋದಲ್ಲಿ ನೋಡಬಹುದಾಗಿದೆ.
ವಿಡಿಯೋದಲ್ಲಿರುವ ವ್ಯಕ್ತಿ ಬ್ಯಾಟಿಂಗ್ ಮಾಡುತ್ತಿದ್ದರೆ ಸುತ್ತ ಇರುವ ನಾಯಿಗಳು ಫೀಲ್ಡಿಂಗ್ ಮಾಡುತ್ತಿದ್ದು, ಬ್ಯಾಟ್‌ನಿಂದ ಸಿಡಿದ ಚೆಂಡನ್ನು ಹಿಡಿಯಲು ಎಲ್ಲೆಡೆ ಓಡುತ್ತಿರುವುದನ್ನು ನೋಡಬಹುದಾಗಿದೆ. ಇಡೀ ದೇಶವೇ ಐಪಿಎಲ್ ಜ್ವರದಲ್ಲಿರುವ ವೇಳೆ ಈ ವಿಡಿಯೋ ಬಲೇ ಮಜವಾಗಿ ಕಾಣುತ್ತಿದೆ.
https://www.instagram.com/p/CFXG9XWn6ST/?utm_source=ig_web_copy_link