
ಜನರೇಷನ್‌ಗಳು ಬದಲಾಗಿ ಅದೆಷ್ಟೇ ವಿಧದ ಹೊಸ ಬಗೆಯ ಖಾದ್ಯಗಳು ಬರುತ್ತಿದ್ದರೂ ದೇಶವಾಸಿಗಳ ಮನದಲ್ಲಿ ಮ್ಯಾಗಿ ನೂಡಲ್ಸ್‌ಗೆ ಇರುವ ಸ್ಥಾನ ಮಾತ್ರ ಅಬಾಧಿತ. ಭಾರತದ ರಾಷ್ಟ್ರೀಯ ಇನ್‌ಸ್ಟಂಟ್ ಫುಡ್ ಎಂದು ಆರಾಮವಾಗಿ ಘೋಷಿಸುವಷ್ಟು ಜನಪ್ರಿಯವಾಗಿದೆ ಮ್ಯಾಗಿ ನೂಡಲ್ಸ್.
ಮದುವೆ ಸಮಾರಂಭವೊಂದರ ವೇಳೆ ಮ್ಯಾಗಿ ನೂಡಲ್ಸ್‌ಗೆಂದೇ ಪ್ರತ್ಯೇಕ ಕೌಂಟರ್ ಒಂದನ್ನು ಇಟ್ಟಿರುವ ಚಿತ್ರವೊಂದು ವೈರಲ್ ಆಗಿದ್ದು, ಯುವ ಹಾಗೂ ಟೀನೇಜ್ ನೆಟ್ಟಿಗರಿಗೆ ಇದು ಭಾರೀ ಇಷ್ಟವಾಗಿಬಿಟ್ಟಿದೆ.
ಸೌಮ್ಯ ಲಖಾನಿ ಹೆಸರಿನ ಟ್ವಿಟ್ಟಿಗರೊಬ್ಬರು ಈ ಚಿತ್ರವನ್ನು ಪೋಸ್ಟ್ ಮಾಡಿದ್ದು, “ತಮ್ಮ ಮದುವೆ ಸಮಾರಂಭದ ವೇಳೆ ಮ್ಯಾಗಿ ಕೌಂಟರ್ ಇದೆ ಎಂದು ಖಾತ್ರಿ ಪಡಿಸಿದ ನನ್ನ ಸಹೋದರ ಸಂಬಂಧಿಯ ಮೇಲಿನ ಪ್ರೀತಿ ಇನ್ನಷ್ಟು ಹೆಚ್ಚಾಗಿದೆ” ಎಂದಿದ್ದಾರೆ. ಪ್ರತಿ ಮದುವೆ ಸಮಾರಂಭದಲ್ಲೂ ಹೀಗೊಂದು ಕೌಂಟರ್ ಇದ್ದರೆ ಎಷ್ಟು ಚೆನ್ನ ಎಂದು ಬಹಳಷ್ಟು ಮಂದಿ ಈ ಟ್ವೀಟ್‌ಗೆ ಪ್ರತಿಕ್ರಿಯಿಸಿದ್ದಾರೆ.