ಮಕ್ಕಳು ಕಿಲಾಡಿ ಮಾಡಿದರೆ ‘ಮಂಗನಾಟ’ ಎಂದು ಹೇಳುವುದಿದೆ. ಮಂಗಗಳು ಚಿತ್ರ, ವಿಚಿತ್ರವಾಗಿ ವರ್ತಿಸುವುದೇ ಇದಕ್ಕೆ ಕಾರಣ. ಮಂಗಗಳ ಆಟಕ್ಕೆ ಇಲ್ಲೊಂದು ಅಪರೂಪದ ಫೋಟೋ ಸಾಕ್ಷಿಯಾಗಿದೆ.
ಮಧ್ಯಪ್ರದೇಶದ ತುರಿಯಾದ ಪೆಂಚ್ ರಾಷ್ಟ್ರೀಯ ಉದ್ಯಾನದಲ್ಲಿ ಛಾಯಾಗ್ರಾಹಕ ಅಮನ್ ವಿಲ್ಸನ್ ಎಂಬುವವರು ತೆಗೆದ ಫೋಟೋವನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಫೋಟೋ 60 ಕ್ಕೂ ಹೆಚ್ಚಿನ ಪೇಜ್‌ಗಳಲ್ಲಿ ಶೇರ್ ಆಗಿದೆ. ‘ಪಿಂಚ್ ಪಾರ್ಕ್‌ನಲ್ಲಿ ಪರ್ಯಟನೆ ಮಾಡುವಾಗ ಈ ಫೋಟೋ ತೆಗೆದಿದ್ದೆ. ನಾನು ಈ ಭಾಗದಲ್ಲಿ ಇರುವ ಹೆಣ್ಣು ಹುಲಿಗಾಗಿ ಹುಡುಕುತ್ತಿದ್ದೆ. ಆದರೆ, ಅದು ಸಿಗಲಿಲ್ಲ. ಮಂಗಗಳ ಗುಂಪು ಆಡುತ್ತಿತ್ತು. ಆಗ ಈ ಫೋಟೋ ಸಿಕ್ಕಿತು’ ಎಂದು ವಿಲ್ಸನ್ ಕ್ಯಾಪ್ಶನ್ ನೀಡಿದ್ದಾರೆ.
ಫೋಟೋದಲ್ಲಿ ಮಂಗವು ಒಂದು ಪೊಳ್ಳು ಮರದೊಳಗೆ ತನ್ನ ತಲೆಯನ್ನು ಹೊಕ್ಕಿಸಿಕೊಂಡು ಕುಳಿತಿದೆ. ಆ ಮಂಗಕ್ಕಾಗಿಯೇ ಮರವನ್ನು ಕೆತ್ತಿ ಇಟ್ಟಷ್ಟು ಪರ್ಫೆಕ್ಟ್ ಆಗಿ ಮರದಲ್ಲಿ ಪೊಳ್ಳಿದೆ. ಮಂಗವೂ ಫೋಟೋಗೆ ಫೋಸ್ ನೀಡುವಂತೆಯೇ ನೋಡುತ್ತಿದೆ. ಒಟ್ಟಿನಲ್ಲಿ ಮಂಗನಾಟಕ್ಕೆ ಇದೊಂದು ಚಂದದ ಉದಾಹರಣೆಯಂತಿದೆ.
https://www.instagram.com/p/CHfY_8eAA8e/?utm_source=ig_web_copy_link